
BBMP ಮೇಲೆ ಎಸಿಬಿ ಅಧಿಕಾರಿಗಳ ದಾಳಿ: ಪಾಲಿಕೆ ವಿರುದ್ಧ ACBಗೆ ಹರಿದು ಬರ್ತಿವೆ ಸಾಲು ಸಾಲು ದೂರು
ಬೆಂಗಳೂರು: ಬಿಬಿಎಂಪಿ ಮೇಲೆ ಎಸಿಬಿ ದಾಳಿ ನಡೆಸಿದ ಬಳಿಕ ಪಾಲಿಕೆ ವಿರುದ್ಧ ನೂರಾರು ದೂರುಗಳು ಹರಿದು ಬರುತ್ತಿವೆ. ಎಸಿಬಿಗೆ ಬಿಬಿಎಂಪಿಯ ಟಿಡಿಆರ್, ಡಿಆರ್ ಸಿ ಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಎಸಿಬಿ ಇದೀಗ 2018 ರಿಂದು 2022 ರವರೆಗಿನ ತೆರಿಗೆ ವಂಚನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದೆ. ಟ್ಯಾಕ್ಸ್ ವಿಭಾಗದಲ್ಲೇ ಸುಮಾರು 1 ಸಾವಿರ ಕೋಟಿಯಷ್ಟು ತೆರಿಗೆ ವಂಚನೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಟೌನ್ ಪ್ಲ್ಯಾನಿಂಗ್ ಹಾಗೂ ಟ್ಯಾಕ್ಸ್ ವಿಭಾಗವನ್ನು ಒಗ್ಗೂಡಿಸಿ ಕಡತಗಳನ್ನು ಪರಿಶೀಲಿಸಲು ಎಸಿಬಿ ಮುಂದಾಗಿದೆ. ಅದರಲ್ಲೂ 10 ಅಂತಸ್ತಿಗಿಂತ ಹೆಚ್ಚು ಅಂತಸ್ತುಗಳಿರುವ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಮಾರತ್ತಹಳ್ಳಿ, ವೈಟ್ ಫೀಲ್ಡ್, ಹೆಚ್ ಎಸ್ ಆರ್ ಲೇಔಟ್, ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲೇ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರು ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.