Home Crime ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪು; 10ಜನರಿಗೆ ಗಾಯ; ಓರ್ವ ಸ್ಥಳದಲ್ಲೇ ಸಾವು

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪು; 10ಜನರಿಗೆ ಗಾಯ; ಓರ್ವ ಸ್ಥಳದಲ್ಲೇ ಸಾವು

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪು; 10ಜನರಿಗೆ ಗಾಯ; ಓರ್ವ ಸ್ಥಳದಲ್ಲೇ ಸಾವು

500
0

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಿಂದ ತುಳಸಿ ಕೆರೆ ಸಮೀಪದ ಇಂಡಿ ಬಸಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 10ಕ್ಕೂ ಹೆಚ್ಚು ಜನ ಗಾಯಗೊಂಡು ಸ್ಥಳದಲ್ಲೇ ಓರ್ವ ಮೃತಪಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ ವೀರಣ್ಣಗೌಡ(75) ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಘಟನೆಯ ವಿವರ: ಮಲೆಮಹದೇಶ್ವರ ಬೆಟ್ಟದ ನಿವಾಸಿಗಳಾದ ಕೆಂಪೇಗೌಡ 50, ಮಾದತಂಬಡಿ 70, ಮಾದಯ್ಯ 52,ಜಡೇಮಾದತಂಬಡಿ 75, ಹುಚ್ಚಯ್ಯ 55, ನಾಗ 40, ಪುಟ್ಟಸ್ವಾಮಿ 37, ಮಾದಯ್ಯ66, ಮಹೇಶ್ 23, ಶಾಂತಮ್ಮ42, ಗಿರೀಜಮ್ಮ33 ಸೇರಿದಂತೆ ಹತ್ತಕ್ಕೂ ಹೆಚ್ಚು ಭಕ್ತರು ತೂಫಾನ್ ವಾಹನದಲ್ಲಿ (ಜೀಪ್) ತುಳಸಿ ಕೆರೆ ಸಮೀಪದ ಇಂಡಿ ಬಸಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಪಾಲಾರ್ ರಸ್ತೆಯ ನಾಲ್ಕನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಬೆಟ್ಟದ ತಳಭಾಗಕ್ಕೆ ಬಿದ್ದಿದೆ. ಇದನ್ನು ಕಂಡ ದಾರಿಹೋಕರು ಮ.ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟದ ಎಎಸ್ಐಗಳಾದ ಅಬ್ದುಲ್ ಬೇಗ್ ,ಚಿಕ್ಕಕಾಳೇಗೌಡ, , ಪೇದೆಗಳಾದ ವಿಶ್ವನಾಥ್ ,ವಿಶ್ವ, ಬಸವರಾಜೇಂದ್ರ,ಬಾಬು ಭೇಟಿ ನೀಡಿ ಪರಿಶೀಲನೆ ‌ನಡೆಸಿ 108 ವಾಹನಕ್ಕೆ ಕರೆ ಮಾಡಿದ್ದಾರೆ..ತಕ್ಷಣ ಕೌದಳ್ಳಿ ಗ್ರಾಮದಿಂದ ಆಗಮಿಸಿದ 108 ವಾಹನದ ತುರ್ತು ವೈದ್ಯಕೀಯ ಸಿಬ್ಬಂದಿ ಮಾದೇಶ್ ಹಾಗೂ ಚಾಲಕ ಮಲ್ಲೇಶ್ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ತಮಿಳುನಾಡಿನ ಮೆಟ್ಟೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು‌ ಮಾಡಿದ್ದಾರೆ.ಈ ಸಂಬಂಧ ಮಲೈಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದ್ದು ಇಲ್ಲದಂತಿರುವ 108 ಅಂಬ್ಯಲೆನ್ಸ್ ಸೇವೆ : ಮಲೈಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಗಳಿಗೆ ಅನುಕೂಲವಾಗಲಿ ಎಂದು ಮಲೈಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ 108 ವಾಹನಕ್ಕೆ ಚಾಲಕ ಹಾಗೂ ತುರ್ತು ವೈಧ್ಯಕೀಯ ಸಿಬ್ಬಂದಿ ಕೊರತೆ ಇರುವುದರಿಂದ ಮಲೈಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ .ಇಂತಹ ಅಪಘಾತ ಸಂಭವಿಸಿದಾಗ ಕೌದಳ್ಳಿ, ಹನೂರು ಹಾಗೂ ದೂರದ ಕೊಳ್ಳೇಗಾಲದಿಂದ 108 ವಾಹನ ಬರುವ ವರೆಗೂ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಆದುದರಿಂದ ಸಂಬಂಧಪಟ್ಟ ಜಿಲ್ಲಾಆರೋಗ್ಯಾಧಿಕಾರಿಗಳು ಇತ್ತ ಗಮನಹರಿಸಿ ಮಲೈಮಹದೇಶ್ವರ ಬೆಟ್ಟ 108 ವಾಹನಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ‌ ಮ.ಬೆಟ್ಟದ ನಿವಾಸಿಗಳು ಒತ್ತಾಯಿಸಿದ್ದಾರೆ.

ಮ.ಬೆಟ್ಟದಲ್ಲಿ ವೈದ್ಯಾಧಿಕಾರಿ ಕೊರತೆ ಮಲೈಮಹದೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 25 ಕ್ಕೂ ಹೆಚ್ಚು ಕಾಡಾಂಚಿನಿಂದ ಕೂಡಿರುವ ಗ್ರಾಮಗಳಿವೆ. ಈ ಎಲ್ಲಾ ಗ್ರಾಮಗಳಲ್ಲಿನ ನಿವಾಸಿಗಳು ಅನಾರೋಗ್ಯ ಬಂದಲ್ಲಿ ಮ.ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಪಡೆಯಬೇಕು. ಆದರೇ ಇಲ್ಲಿ ಖಾಯಂ ವೈದ್ಯಾಧಿಕಾರಿ ಇಲ್ಲದೇ ಇರುವುದರಿಂದ ರೋಗಿಗಳು ಹಾಗೂ ಜಾತ್ರಾ ಸಂದರ್ಭದಲ್ಲಿ ಭಕ್ತರು ಪರದಾಡುವಂತ ಸ್ಥಿತಿ ಉಂಟಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು 30 ಹಾಸಿಗೆವುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದ್ದರು. ಇದು ಭರವಸೆಯಾಗಿ ಉಳಿದಿದೆ ಹೊರತು ಕಾರ್ಯಗತವಾಗಿಲ್ಲ, ಈ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೇ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ನಿವಾಸಿಗಳು ಸೇರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ..

VIAಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪು; 10ಜನರಿಗೆ ಗಾಯ; ಓರ್ವ ಸ್ಥಳದಲ್ಲೇ ಸಾವು
SOURCEಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪು; 10ಜನರಿಗೆ ಗಾಯ; ಓರ್ವ ಸ್ಥಳದಲ್ಲೇ ಸಾವು
Previous articleಕೊರೋನಾ ಡೆಡ್ ಬಾಡಿಗೂ 1,40,000 ರೂಪಾಯಿ ಬೆಲೆ!
Next articleಹಿಟ್ ಅಂಡ್ ರನ್ ಗೆ ವೃದ್ದ ಬಲಿ!

LEAVE A REPLY

Please enter your comment!
Please enter your name here