ನಗ್ನ ಚಿತ್ರ ಅನ್ಯರಿಗೆ ಕಳುಹಿಸಿದ ಆರೋಪ : ಗಂಡನಿಗೆ ಹಿಗ್ಗಾಮುಗ್ಗ ಥಳಿಸಿದ ಹೆಂಡತಿ

ಜಿಲ್ಲೆ

ಕೊಡಗು: ತನ್ನ ನಗ್ನಚಿತ್ರವನ್ನು ಬೇರೆಯವರ ಮೊಬೈಲ್‌‌‌ಗೆ ಕಳುಹಿಸಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ತನ್ನ ಸಹೋದರರ ಜೊತೆ ಸೇರಿ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆ ಶನಿವಾರಸಂತೆಯ ಸುಳುಗಳಲೆ ಕಾಲೋನಿಯಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಕೂಲಿ ಕಾರ್ಮಿಕ ರಾಜು ಹಲ್ಲೆಗೊಳಗಾದ ವ್ಯಕ್ತಿ. ಈತನ ಪತ್ನಿ ಅಭಿಲಾಷಾ, ಆಕೆಯ ಸಹೋದರರಾದ ವೀರಾಜಪೇಟೆ ಶಿವಕೇರಿಯ ಎಚ್. ಪಿ. ಮಧುಸೂದನ್ ಮತ್ತು ಅಭಿಷೇಕ್ ಆರೋಪಿಗಳು. ರಾಜು ಮನೆಯಲ್ಲಿ ಕಿರುಚಾಡುವ ಶಬ್ದ ಕೇಳಿ ಪಕ್ಕದ ಮನೆಯಲ್ಲಿದ್ದ ಆತನ ಸಹೋದರ ವೆಂಕಟೇಶ್ ಹಾಗೂ ಪುತ್ರ ಶುಭಕರ ಧಾವಿಸಿ ಬಂದಿದ್ದಾರೆ. ಈ ವೇಳೆ ತಮ್ಮನ ಮೇಲೆ ಆತನ ಪತ್ನಿ ಅಭಿಲಾಷಾ ಹಾಗೂ ಆಕೆಯ ಸಹೋದರರು ಕೊಲ್ಲುವುದಾಗಿ ಹೇಳುತ್ತಾ ಲಟ್ಟಣಿಗೆ, ಕಬ್ಬಿಣದ ರಾಡು, ಕೊಡಲಿ ಹಾಗೂ ಸೌದೆಯಿಂದ ಹಲ್ಲೆ ಮಾಡುತ್ತಿರುವುದು ಕಂಡಿದೆ. ಪಕ್ಕದ ಮನೆಯಲ್ಲಿದ್ದ ರಾಜು ತಂದೆ ಕೆಂಚಪ್ಪ ಮತ್ತು ಇನ್ನೊಬ್ಬ ಪುತ್ರ ನಾಗರಾಜು ಕೂಡ ಓಡಿ ಬಂದು ಗಲಾಟೆ ಬಿಡಿಸಿ, ರಾಜುವನ್ನು ಅಂಬುಲೆನ್ಸ್‌‌‌ನಲ್ಲಿ ಅರಕಲುಗೂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದಾರೆ.ರಾಜು ಸಹೋದರ ವೆಂಕಟೇಶ್ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್‌‌ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ ಶಶಿಕುಮಾರ್, ಪ್ರದೀಪ್ ಕುಮಾರ್, ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಾದ ಮಧಸೂದನ್ ಮತ್ತು ಅಭಿಲಾಷರನ್ನು ಬಂಧಿಸಲಾಗಿದೆ.

Leave a Reply

Your email address will not be published.