ಯಶಸ್ಸಿಗಿಂತ ಸಾಧನೆ ಮುಖ್ಯ, ಸಾಧಕನಿಗೆ ಸಾವು ಅಂತ್ಯವಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು

ಯಶಸ್ಸಿಗಿಂತ ಸಾಧನೆ ಮುಖ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮಹಾತ್ಮ ಗಾಂಧಿ ವಿದ್ಯಾ ಪೀಠ ಟ್ರಸ್ಟ್, ದಯಾನಂದ ಸಾಗರ್ ವಿದ್ಯಾಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಬ್ಯಾರಿಸ್ಟರ್ ಆರ್. ದಯನಾಂದ್ ಸಾಗರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕನಾಂದರು ಹೇಳಿದ್ದಾರೆ.

ಇವತ್ತಿನ ಕ್ಷಣವನ್ನು ಸಾರ್ಥಕತೆಯಿಂದ ಬದುಕಿದರೆ ನಾವು ಇಲ್ಲದಿರುವಾಗಲೂ ಜನ ನಮ್ಮನ್ನು ನೆನಪಿಸುತ್ತಾರೆ ಎಂದರು. ಇನ್ನೂ ದಯಾನಂದ ಸಾಗರ್ ಹಾಕಿದ ಅಡಿಪಾಯವನ್ನು ಬಳಸಿ ಅವರ ಇಬ್ಬರೂ ಮಕ್ಕಳು ಶಿಕ್ಷಣದ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.

ಅವರು ಸಾಧಕರು ಎಂದು ಕರೆದ ಮುಖ್ಯಮಂತ್ರಿ, ಕಲೆ, ಸಂಸ್ಕೃತಿಗಾಗಿ ಸಂಸ್ಥೆಗಳನ್ನು ಕಟ್ಟಿದ ದಯಾನಂದ ಸಾಗರ್ ಅವರು ಚಲನಚಿತ್ರ ರಂಗದಲ್ಲಿ ಸಂಸ್ಥೆಯನ್ನೇ ಕಟ್ಟಿದರು. ಅವರೊಬ್ಬ ಮುಂದಾಲೋಚನೆಯ ಸಾಂಸ್ಥಿಕ ವ್ಯಕ್ತಿಯಾಗಿದ್ದರು. ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ ದಾರಿ ದೀಪವಾದರು ಎಂದು ಸ್ಮರಿಸಿದರು.

Leave a Reply

Your email address will not be published.