ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಆ್ಯಸಿಡ್ ನಾಗನ ಮೇಲೆ 300 ಪುಟಗಳ ಚಾರ್ಜ್ ಶೀಟ್

ಬೆಂಗಳೂರು

ಬೆಂಗಳೂರು: ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ವಿಕೃತ ಪ್ರೇಮಿ ನಾಗೇಶ್‍ನ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬರೋಬ್ಬರಿ 300ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ಸಿದ್ಧಪಡಿಸಿರುವ ಪೊಲೀಸರು, ಆರೋಪಿ ಉಳಿದುಕೊಂಡಿದ್ದ ತಿರುವಣ್ಣಮಲೈ ಸೇರಿದಂತೆ 13 ಕಡೆಗಳಲ್ಲಿ ಮಹಜರು ಮಾಡಿದ್ದರು. ಪ್ರಾಥಮಿಕ ಆರೋಪ ಪಟ್ಟಿಯಲ್ಲಿ 60 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಹತ್ತು ಪುಟಗಳಲ್ಲಿ ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಯುವತಿಗೆ ಹಾಕಿದ ಆ್ಯಸಿಡ್ ಸೆಲ್ಪೂರಿಕ್ ಆ್ಯಸಿಡ್ ಎನ್ನುವುದು ಎಫ್‍ಎಸ್‍ಎಲ್ ರಿಪೋರ್ಟ್‍ನಿಂದ ಗೊತ್ತಾಗಿದೆ.

ಯುವತಿ ಬಟ್ಟೆ ಮೇಲೆ ಬಿದ್ದಿದ್ದ ಆ್ಯಸಿಡ್, ಕೂದಲು, ಚರ್ಮ ಎಲ್ಲದರ ಎಫ್‍ಎಸ್‍ಎಲ್ ರಿಪೋರ್ಟ್‍ನಲ್ಲಿ ಸಲ್ಫೂರಿಕ್ ಎಂಬುದು ದೃಢವಾಗಿದೆ. ಬರೋಬ್ಬರಿ ಒಂಭತ್ತು ಲೀಟರ್ ಆ್ಯಸಿಡ್ ಖರೀದಿಸಿದ್ದ ಆರೋಪಿ, ಅರ್ಧ ಲೀಟರ್ ಯುವತಿ ಮೇಲೆ ಎರಚಿ ಉಳಿದರ್ಧ ಲೀಟರ್ ಬಿಸಾಕಿದ್ದ. 8 ಲೀಟರ್ ಆ್ಯಸಿಡ್ ಅನ್ನು ಜಪ್ತಿ ಮಾಡಲಾಗಿದೆ. ಸಿಸಿಟಿವಿ ಫೋನ್ ಕರೆ ಸೇರಿದಂತೆ ಬಲವಾದ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಇನ್ನು ಯುವತಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ 164 ಹೇಳಿಕೆ ದಾಖಲಿಸಬೇಕಿದೆ. ಆ ಬಳಿಕ ಚಾರ್ಜ್‍ಶೀಟ್ ಸಲ್ಲಿಕೆಯಾಗಲಿದೆ.

Leave a Reply

Your email address will not be published.