
ನಟ ಚೇತನ್ ಬಂಧನ..! ನನ್ನ ಗಂಡ ಕಾಣೆಯಾಗಿದ್ದಾರೆ ಎಂದು ಪತ್ನಿ ಆರೋಪ
ಬೆಂಗಳೂರು: ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ನಟ ಚೇತನ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯ ಪೊಲೀಸರು ಚೇತನ್ ರನ್ನು ವಶಕ್ಕೆ ಪಡೆದಿದ್ದಾರೆ. ಚೇತನ್ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ನಾನು ಮನೆಯಲ್ಲಿದ್ದೆ, ನನಗೆ ಗೊತ್ತಿರಲಿಲ್ಲ, 1 ಗಂಟೆಯಿಂದ ಹುಡುಕಿದರೂ ಅವರು ಎಲ್ಲೂ ಸಿಗಲಿಲ್ಲ.
ಕೆಲವರು ಚೇತನ್ ರನ್ನು ಪೊಲೀಸರು ಕರೆದೋಯ್ದಿದ್ದಾರೆ ಎಂಬ ಮಾಹಿತಿ ಕೊಟ್ಟರು. ಆದರೆ ಚೇತನ್ ಮತ್ತು ಅವರ ಗನ್ ಮ್ಯಾನ್ ಫೋನ್ ಸ್ವಿಚ್ ಆಫ್ ಆಗಿತ್ತು. ಚೇತನ್ ಶೇಷಾದ್ರಿಪುರಂ ಠಾಣೆಯಲ್ಲಿ ಇಲ್ಲ, ಅವರನ್ನು ವಿಚಾರಣೆಗಾಗಿ ಬೇರೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಮಗೆ ಪೊಲೀಸರು ಯಾವುದೇ ನೋಟಿಸ್ ನೀಡಿರಲಿಲ್ಲ. ಪೊಲೀಸರು ಚೇತನ್ ರನ್ನು ಮುಚ್ಚಿಡುತ್ತಿದ್ದಾರೆ ಎಂದು ತಿಳಿಸಿದ್ಧಾರೆ.