
ನಟ ಚೇತನ್ ಬಿಡುಗಡೆ: ಅಭಿಮಾನಿಗಳಲ್ಲಿ ಸಂಭ್ರಮ
ಬೆಂಗಳೂರು: ನ್ಯಾಯಾಂಗ ನಿಂದನೆ ಆರೋಪದ ಮೇರೆಗೆ ಜೈಲು ಪಾಲಾಗಿದ್ದ ನಟ ಚೇತನ್ ಜಾಮೀನಿನ ಮೇಲೆ ಬಿಡುಗಡೆಯಾಗಿ ದ್ದಾರೆ. ಬಿಡುಗಡೆ ಬಳಿಕ ಪರಪ್ಪನ ಅಗ್ರಹಾರದ ಬಳಿ ಚೇತನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹೋರಾಟಗಾರನಿಗೆ ಸೆರೆಮನೆ ಅರಮನೆಯಂತೆ. ಒಂದು ಟ್ವೀಟ್ ಹಾಕಿದ್ದಕ್ಕೆ ಸುಮೋಟೊ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ನನ್ನ ಟ್ವೀಟ್ ನಲ್ಲಿ ಯಾವುದೇ ಅವಹೇ ಳನಕಾರಿ ಹೇಳಿಕೆಯಾಗಲೀ, ಪ್ರಚೋದನಾತ್ಮಕ ಅಂಶವಾಗಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಬ್ಲಿಕ್ ಸರ್ವೆಂಟ್ ಅಂದ್ರೆ ಸಾರ್ವಜನಿಕರ ಟ್ಯಾಕ್ಸ್ ಹಣ ವೇತನ ಪಡೆಯೋರು. ಸಿಎಂ, ಎಂಎಲ್ಎ, ಜಡ್ಜ್ ಯಾರೆ ಆಗಿದ್ದರು ಯಾರೂ ಕೂಡ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರ ಅಲ್ಲ, ನಮ್ಮ ಜವಾಬ್ದಾರಿ. ಪೊಲೀಸರ ಕ್ರಮ ಅಸಂವಿಧಾನಿ ಕವಾದದ್ದು, ಅಸೆಂಬ್ಲಿಯಲ್ಲಿ ರೇಪ್ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರಲ್ಲ,ಅವರನ್ನ ಯಾಕೆ ಬಂಧಿಸಿಲ್ಲ ಎಂದು ಬಿಡುಗಡೆ ಬಳಿಕ ಪರಪ್ಪನ ಅಗ್ರಹಾರದ ಬಳಿ ನಟ ಚೇತನ್ ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.