ಅಭಿಮಾನಿ ಮೇಲೆ ನಟ ಧನ್ವೀರ್ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್: ದೂರು ನೀಡಿದ್ದ ಯುವಕನಿಂದ ಹೊಸ ಬಾಂಬ್

ಚಲನಚಿತ್ರ

ನಟ ಧನ್ವೀರ್ ಗೌಡ ಕಳೆದ ಗುರುವಾರ ರಾತ್ರಿ ತಮ್ಮ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದಾನೆಂದು ಸುದ್ದಿಯಾಗಿತ್ತು. ಹಲ್ಲೆಗೊಳಗಾದ ವ್ಯಕ್ತಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಧನ್ವೀರ್, ಇದು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಮಾಡಲಾಗಿರುವ ಪಿತೂರಿ. ಚಿತ್ರರಂಗದಲ್ಲಿ ರೌಡಿಸಂ ಮಾಡಲೆಂದೇ ಕೆಲವರು ಬಂದಿದ್ದಾರೆ. ಕೆಲವು ಹುಡುಗರನ್ನು ಇಟ್ಟುಕೊಂಡು ಹೀಗೆಲ್ಲ ಮಾಡುತ್ತಿದ್ದಾರೆ. ಸೂಕ್ತ ಸಾಕ್ಷ್ಯ ಸಂಗ್ರ ಹಿಸಿದ ಬಳಿಕ ಎಲ್ಲವನ್ನು ಬಹಿರಂಗಗೊಳಿಸುತ್ತೇನೆ

ಆದರೆ ಇದೀಗ ನಟ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವಕ ಚಂದ್ರಶೇಖರ್ ಸ್ವತಃ ಧನ್ವೀರ್‌ಗೆ ಕ್ಷಮೆ ಕೇಳಿ ದ್ದಾನೆ. ಅಚಾನಕ್ಕಾಗಿ ಆ ಘಟನೆ ನಡೆದಿದೆ. ಧನ್ವೀರ್‌ ಅವರದ್ದು ಈ ಪ್ರಕರಣದಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾನೆ. ಧನ್ವೀರ್ ಅಭಿಮಾ ನಿಗಳ ಸಂಘದ ಮುಖಂಡರೊಬ್ಬರೊಂದಿಗೆ ನಿಂತು ವಿಡಿಯೋದಲ್ಲಿ ಮಾತನಾಡಿರುವ ಚಂದ್ರಶೇಖರ್, ”ಧನ್ವೀರ್‌ ನನಗೆ ಹೊಡೆದಿಲ್ಲ. ನನ್ನ ಕಡೆಯಿಂದ ಅವರಿಗೆ ಕ್ಷಮೆ ಇರಲಿ, ಅವರೂ ಸಹ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದಾರೆ. ಮೊದಲಿಗೆ ಮಾತನಾಡುವ ಅಭಿಮಾನಿ ಸಂಘದ ಮುಖಂಡ, ”ಘಟನೆಯನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಈ ಯುವಕನದ್ದೇ ತಪ್ಪು ಎಂಬುದು ಗೊತ್ತಾಯಿತು. ಈ ಹುಡುಗ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ” ಎಂದು ಹೇಳಿದ್ದಾರೆ.

”ಅಂದು ರಾತ್ರಿ ಮತ್ತಿನಲ್ಲಿ ನಾನು ತುಸು ಹೆಚ್ಚು ಮಾತನಾಡಿರಬಹುದೇನೋ. ಅಲ್ಲಿ ಏನೋ ಆಗಿರಬಹುದು. ಯಾರೋ ಏನೋ ಮಾಡಿರ ಬಹುದು. ಅಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಒಟ್ಟಾರೆ ನನ್ನ ಕಡೆಯಿಂದಲೂ ಕ್ಷಮೆ ಇರಲಿ, ಅವರೂ ಸಾರಿ ಕೇಳಿದ್ದಾರೆ. ಈ ಮೂವಿ (ಧನ್ವೀರ್ ನಟನೆಯ ‘ಬೈ ಟು ಲವ್) ಚೆನ್ನಾಗಿ ಇದೆಯಂತೆ. ನನ್ನಿಂದ ಈ ಸಿನಿಮಾಕ್ಕೆ ಕೆಟ್ಟ ಹೆಸರು ಬಂದಿದೆ. ಆದರೆ ಆ ಕೆಟ್ಟ ಹೆಸರು ನನಗೂ ಬರುವುದು ಬೇಡ, ಅವರಿಗೂ ಬರುವುದು ಬೇಡ ಇದು ಇಲ್ಲಿಗೇ ಕೊನೆ ಆಗಲಿ” ಎಂದು ವಿಡಿಯೋದಲ್ಲಿ ಗೊಂ ದಲಪೂ ರ್ಣವಾಗಿ ಮಾತನಾಡಿದ್ದಾರೆ ಚಂದ್ರಶೇಖರ್.

Leave a Reply

Your email address will not be published.