ನಟ ಸುದೀಪ್ ಗೆ ಧ್ವಜ ನೀಡಿದ ಬಿಜೆಪಿ ನಾಯಕರು: ‘’ಹರ್ ಘರ್ ತಿರಂಗಾ’’ ಅಭಿಯಾನಕ್ಕೆ ಕಿಚ್ಚಿನಿಗೆ ಆಹ್ವಾನ

ಚಲನಚಿತ್ರ ಬೆಂಗಳೂರು ರಾಜಕೀಯ

ಬೆಂಗಳೂರು: ಜೆಪಿ ನಗರದಲ್ಲಿರುವ ನಟ ಕಿಚ್ಚ ಸುದೀಪ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗ ಭೇಟಿ ನೀಡಿದೆ. ಈ ವೇಳೆ ತ್ರಿವರ್ಣ ಧ್ವಜ ನೀಡುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಆಹ್ವಾನಿಸಿದೆ.ಆಗಸ್ಟ್ 13 ರಿಂದ 15ರವರೆಗೆ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಆಯೋಜಿಸಲಾಗಿದೆ. ನಿಮ್ಮ ನಿವಾಸದಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ. ಬಿಜೆಪಿ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುದೀಪ್,

ಗೌರವಪೂರ್ವಕವಾಗಿ ರಾಷ್ಟ್ರಧ್ವಜ ಸ್ವೀಕರಿಸಿದರು. ತಮ್ಮ ನಿವಾಸದಲ್ಲಿಯೂ ರಾಷ್ಟ್ರ ಧ್ವಜಾರೋಹಣ ಮಾಡುವ ಭರವಸೆ ನೀಡಿದರು. ಈ ಬಾರಿ ತಿರಂಗಾ ಅಭಿಯಾನ ಸಫಲಗೊಳಿಸಲು ನೂತನವಾಗಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ರಾಜೇಶ್ ಕುಂತೂರ್ ವಿಶೇಷ ಆಸಕ್ತಿ ವಹಿಸಿದ್ದಾರೆ. ಅಧಿಕಾರ ಸ್ವೀಕಾರದ ಬಳಿಕ ಅವರಿಗೆ ಸಿಕ್ಕಿರುವ ಮೊದಲ ಸಂಘಟನಾತ್ಮಕ ಟಾಸ್ಕ್ ಈ ಅಭಿಯಾನವಾಗಿರುವುದರಿಂದ ಹೆಚ್ಚಿನ ಮುತುವರ್ಜಿ ವಹಿಸಿ ದೊಡ್ಡಮಟ್ಟದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ..

Leave a Reply

Your email address will not be published.