ನಟ ಸೂರ್ಯ, ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾದ FIR ರದ್ದು

ಚಲನಚಿತ್ರ

ಚೆನ್ನೈ: ಸೂರ್ಯ ನಟನೆಯ ತಮಿಳಿನ ತಮಿಳಿನ ಜೈಭೀಮ್ ಸಿನಿಮಾದಲ್ಲಿ ವಣ್ಣಿಯಾರ್ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟ ಸೂರ್ಯ ಮತ್ತು ನಿರ್ದೇಶಕ ಜ್ಞಾನವೇಲ್ ರಾಜ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದೆ.

ನಟ ಸೂರ್ಯ ಹಾಗೂ ನಿರ್ದೇಶಕ ಜ್ಞಾನವೇಲ್ ರಾಜ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಸಂತೋಷ್ ಕುಮಾರ್ ಈ ತೀರ್ಪು ಪ್ರಕಟಿಸಿದ್ದಾರೆ. ಚಿತ್ರದಲ್ಲಿ ವಣ್ಣಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಚೆನ್ನೈ ಮೂಲದ ವಕೀಲ ಕೆ. ಸಂತೋಷ್ ಎಂಬುವವರು ಮೆಟ್ರೋಪಾಲಿಯನ್ ಮ್ಯಾಜಿಸ್ಟ್ರೇಟ್ ಮೆಟ್ಟಿಲೇರಿದ್ದರು.

ಸೂರ್ಯ ಮತ್ತು ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನ್ಯಾಯಾಲಯ ಮೇ 6 ರಂದು ಆದೇಶ ಹೊರಡಿಸಿತ್ತು. ನಂತರ ವೆಲಾಚೇರಿ ಪೊಲೀಸರು ಮೇ 17 ರಂದು ಸೂರ್ಯ ಮತ್ತು ಜ್ಞಾನವೇಲ್ ರಾಜ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.

Leave a Reply

Your email address will not be published.