Home Cinema ಪ್ರೀತಿಸಿ ಮದುವೆಯಾದ ಸ್ಯಾಂಡಲ್ ವುಡ್ ನಟಿ ಮಯೂರಿ: ಲೀಲಾ ಕೈ ಹಿಡಿದ ಲಕ್ಕಿ ಬಾಯ್ ಯಾರು...

ಪ್ರೀತಿಸಿ ಮದುವೆಯಾದ ಸ್ಯಾಂಡಲ್ ವುಡ್ ನಟಿ ಮಯೂರಿ: ಲೀಲಾ ಕೈ ಹಿಡಿದ ಲಕ್ಕಿ ಬಾಯ್ ಯಾರು ಗೊತ್ತಾ.?

469
0
SHARE

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಯೂರಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ಮಯೂರಿ ನಂತರ ಕೃಷ್ಣಲೀಲಾ ಸಿನಿಮಾದ ಮೂಲಕ ಮನೆ ಮಾತಾಗಿದ್ರು. ಇಂದು ನಟಿ ಮಯೂರಿ ಸಪ್ತಪದಿ ತುಳಿದಿದ್ದಾರೆ.

ಇಂದು ಲವ್ ಕಂ ಅರೇಂಜ್ ಮ್ಯಾರೇಜ್. ಹತ್ತುವರ್ಷಗಳ ಗೆಳೆಯ ಅರುಣ್‌ರನ್ನ ಇಂದು ನಟಿ ಮಯೂರಿ ವರಿಸಿದ್ದಾರೆ. ಇಂದು ಬೆಳಿಗ್ಗೆ ಜೆಪಿನಗರದ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ-ಅರುಣ್ ವಿವಾಹ ಸರಳವಾಗಿ ನಡೆದಿದೆ.

ಬೆಳಿಗ್ಗೆ 2 ರಿಂದ 3 ಘಂಟೆಯ ಬ್ರಾಹ್ಮಿ ಲಗ್ನದಲ್ಲಿ ಮದುವೆ ನಡೆದಿದ್ದು, ಬಹುಕಾಲದ ಪ್ರೇಮಪಕ್ಷಿಗಳು ಇಂದು ವಿವಾಹವೆಂಬ ಸುಂದರ ಬಂಧನದಲ್ಲಿ ಒಂದಾಗಿದ್ದಾರೆ. ಮಯೂರಿ ಸ್ಟ್ರಗಲ್ ಟೈಮ್‌ನಿಂದಲೂ ಒಬ್ಬರೊನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ರು. ಎರಡು ಮನೆಯವರ ಒಪ್ಪಿಗೆ ತೆಗೆದುಕೊಂಡೇ ಇಂದು ಮದುವೆಯಾಗಿದ್ದಾರೆ.

ಅರುಣ್ ಮಯೂರಿಯನ್ನ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅರುಣ್ ಸದ್ಯಕ್ಕೆ ಯು.ಎಸ್.ಎನಲ್ಲಿ ಸೆಟಲ್ ಆಗಿದ್ದಾರೆ. ಗೆಳೆತನದ ಬೆಸುಗೆ ಈಗ ದಾಂಪತ್ಯದ ದಾರಿ ಹಿಡಿದಿದೆ. ಈ ಸಂತೋಷದ ವಿಷಯವನ್ನ ಈಗ ಸ್ವತಃ ಮಯೂರಿ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ. 10 ವರ್ಷದ ಗೆಳೆತನಕ್ಕೆ ಒಂದು ಹೊಸ ಅರ್ಥ ಸಿಕ್ಕಿದೆ. ಇನ್ನಷ್ಟು ಮಾಹಿತಿಯನ್ನ ಸದ್ಯದಲ್ಲೇ ಕೊಡ್ತೀನಿ ಅಂತ ಸ್ಮೈಲ್ ಮಾಡಿದ್ದಾರೆ ಈ ಸ್ಯಾಂಡಲ್‌ವುಡ್ ಲೀಲಾ.

LEAVE A REPLY

Please enter your comment!
Please enter your name here