ನಟಿ ರಾಖಿ ಸಾವಂತ್ ಗೆ ಏನಾಯ್ತು..? ಬೀದಿಲಿ ನಿಂತು ಹೊಸ ಅವತಾರ ಎತ್ತಿದ Rakhi Sawant

ಚಲನಚಿತ್ರ

ಕೆಲ ತಿಂಗಳ ಹಿಂದೆಯಷ್ಟೇ ಮೈಸೂರು ಮೂಲದ ಆದಿಲ್ ಎಂಬ ಹುಡುಗನ ಜೊತೆ ಸುತ್ತಾಡುತ್ತಿದ್ದ ಬಾಲಿವುಡ್ ನಟಿ ರಾಖಿ ಸಾವಂತ್, ದಿಢೀರ್ ಅಂತ ಬೇಬಿ ಬಂಪ್ ಜೊತೆ ಕಾಣಿಸಿಕೊಂಡಿದ್ದಾರೆ. ಏಕಾಏಕಿ ಬೇಬಿ ಬಂಪ್ ಕಂಡ ಜನರು ಈ ಹುಚ್ಚಾಟಕ್ಕೆ ಉಗಿದಿದ್ದಾರೆ. ಪ್ರಚಾರ ಮತ್ತು ವಿವಾದಕ್ಕಾಗಿ ಈಕೆ ಏನೆಲ್ಲ ಮಾಡುವುದಕ್ಕೆ ರೆಡಿ ಎಂದು ಜರಿದಿದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್ ಹಾಗೆ ಮಾಡಿದ್ದು ಮತ್ತು ತಾವು ಪೈಗಂಬರ್ ಮತ್ತು ಬಾಹುಬಲಿಗೆ ಜನ್ಮ ನೀಡುವೆ ಅಂತ ಹೇಳಿದ್ದಕ್ಕೂ ಕಾರಣವಿದೆ.

ರಾಕಿ ಸಾವಂತ್ ಹೊಟ್ಟೆಗೆ ಬಲೂನ್ ಕಟ್ಟಿಕೊಂಡು ಅದು ಬೇಬಿ ಬಂಪ್ ಎಂದು ತೋರಿಸಲು ಹೋಗಿದ್ದಾರೆ. ತಮ್ಮ ಅಕ್ಕಪಕ್ಕದ ಮನೆಯವರನ್ನು ಸೇರಿಸಿ, ನೀವೆಲ್ಲ ಪಾಪ ಮಾಡಿದ್ದೀರಿ. ಪಾಪ ಪರಿಹಾರಕ್ಕಾಗಿ ನಾನು ಪೈಗಂಬರ್ ಮತ್ತು ಬಾಹುಬಲಿಗೆ ಜನ್ಮ ನೀಡುತ್ತೇನೆ. ಆಗ ನಿಮಗೆಲ್ಲ ಪಾಪದಿಂದ ಮುಕ್ತಿ ಸಿಗಲಿದೆ ಎಂದೆಲ್ಲ ಭಾಷಣ ಮಾಡಿದ್ದಾರೆ. ಅಂದರೆ, ತಾವು ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಅವನಿಂದ ಮಗುವನ್ನೂ ಪಡೆಯುತ್ತೇನೆ ಎನ್ನುವ ಅರ್ಥದಲ್ಲಿ ಅವರು ಪೈಗಂಬರಿಗೆ ಜನ್ಮ ನೀಡುತ್ತೇನೆ ಅಂದಿದ್ದಾರೆ.

ಇಷ್ಟೆಲ್ಲ ಭಾಷಣ ಮುಗಿದ ನಂತರ ತಾವೇ ಹೊಟ್ಟೆಗೆ ಸುತ್ತಿಕೊಂಡಿದ್ದ ಬಲೂನ್ ಒಡೆದು ನಗುತ್ತಾರೆ. ಈ ಹುಚ್ಚಾಟಕ್ಕೆ ದಾರಿ ಹೋಕರೆಲ್ಲ ನಕ್ಕು ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಕೂಡ ಆಗಿದೆ. ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚು ಬಂದಿವೆ.

 

Leave a Reply

Your email address will not be published.