ನಟಿ ರಮ್ಯಾ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡೋದು ಬಹುತೇಕ ಖಚಿತ..!

ಚಲನಚಿತ್ರ

ಬೆಂಗಳೂರು: ನಟಿ ರಮ್ಯಾ ಅವರು ಸ್ಯಾಂಡಲ್​ವುಡ್​ಗೆ ಕಮ್​​ಬ್ಯಾಕ್​ ಮಾಡೋದು ಬಹುತೇಕ ಖಚಿತವಾಗಿದೆ. ಅವರು ಚಿತ್ರರಂಗಕ್ಕೆ ಮರಳಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಕೊನೆಗೂ ರಮ್ಯಾ ಇದಕ್ಕೆ ಒಪ್ಪಿದ್ದಾರೆ. ಅವರು ಸ್ಯಾಂಡಲ್​ವುಡ್​ನಲ್ಲಿ ಒಂದಷ್ಟು ಸ್ಕ್ರಿಪ್ಟ್​ ಕೇಳುತ್ತಿದ್ದಾರೆ. ಅದಕ್ಕೂ ಮೊದಲೇ ರಮ್ಯಾ ಕಮ್​​ಬ್ಯಾಕ್​ ಮಾಡಲಿರುವ ಸಿನಿಮಾ ಬಗ್ಗೆ ಒಂದಷ್ಟು ಸುದ್ದಿಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದವು. ಕೆಲ ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಕಟ ಮಾಡಿದ್ದವು. ಈ ಕುರಿತಂತೆ ರಮ್ಯಾ ಈಗ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಕೂಡ ಅವರು ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ  ಅವರು ತಮ್ಮ ದಿನಚರಿ ಬಗ್ಗೆ ಅಪ್​ಡೇಟ್​ ನೀಡುತ್ತಲೇ ಇರುತ್ತಾರೆ. ರಾಜಕೀಯಕ್ಕೂ ಗುಡ್​ಬೈ ಹೇಳಿ ಹಲವು ಸಮಯ ಕಳೆದಿದೆ. ಈಗ ರಮ್ಯಾ ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಅನ್ನೋದು ಖುಷಿಯ ವಿಚಾರ.

ರಮ್ಯಾ ನಟಿಸಿದ ಮೊದಲ ಸಿನಿಮಾ ‘ಅಭಿ’. 2003ರಲ್ಲಿ ಆ ಚಿತ್ರ ಬಿಡುಗಡೆ ಆಗಿತ್ತು. ಆಗ ರಮ್ಯಾ ಅವರಿಗೆ 21 ವರ್ಷ ವಯಸ್ಸು. ಆ ಚಿತ್ರದಿಂದ ಸಿಕ್ಕ ಭಾರಿ ಯಶಸ್ಸಿನ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಹೇರಳ ಅವಕಾಶಗಳು ಒಲಿದು ಬಂದವು. ‘ಅಭಿ’ ನಂತರ ಪುನೀತ್​ ರಾಜ್​ಕುಮಾರ್​ ಜತೆ ‘ಆಕಾಶ್​’ ಮತ್ತು ‘ಅರಸು’ ಸಿನಿಮಾಗಳನ್ನು ಅವರು ಮಾಡಿದರು. ಸ್ಯಾಂಡಲ್​ವುಡ್​ನ ಸ್ಟಾರ್​ ನಟರ ಸಿನಿಮಾಗಳಿಗೆ ಅವರು ಬಹುಬೇಡಿಕೆಯ ಕಲಾವಿದೆಯಾಗಿ ಗುರುತಿಸಿಕೊಡರು. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಅವಕಾಶಗಳು ಇರುವಾಗಲೇ ರಮ್ಯಾಗೆ ರಾಜಕೀಯದಿಂದ ಬುಲಾವ್​ ಬಂತು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆ ಆಗಿಯೂ ಗೆದ್ದು ಬೀಗಿದರು. ರಾಜಕೀಯದಲ್ಲಿ ಕಾಂಗ್ರೆಸ್​ ಪಕ್ಷದ ಜೊತೆ ಗುರುತಿಸಿಕೊಂಡ ಬಳಿಕ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದುಕೊಂಡರು. ಈಗ ಅವರು ಮತ್ತೆ ಸಿನಿಮಾ ಮಾಡು ಮನಸ್ಸು ಮಾಡಿದ್ದು ಕನ್ನಡ ಸಿನಿಮಾ ಮೂಲಕವೇ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

Leave a Reply

Your email address will not be published.