ನಯನತಾರಾ ಜೊತೆಗಿನ ಫೋಟೋ ಹಂಚಿಕೊಂಡ ನಟಿ ಸಮಂತಾ..! ಅಭಿಮಾನಿಗಳಿಗೆ ಸಂಭ್ರಮ

ಚಲನಚಿತ್ರ

ಮುಂಬೈ: ನಯನತಾರಾ ಜತೆಗಿನ ತಮ್ಮ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದ್ದಾರೆ ದಕ್ಷಿಣದ ಖ್ಯಾತ ತಾರೆ ಸಮಂತಾ ರುತ್ ಪ್ರಭು. ಇಬ್ಬರು ಖ್ಯಾತ ನಟಿಯರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿರುವ ಈ ಸಂದರ್ಭದಲ್ಲಿ ಸಮಂತಾ ಶೇರ್ ಮಾಡಿರುವ ಫೋಟೋ ವೈರಲ್ ಆಗಿದೆ. ಕುಚಿಕು ಸ್ನೇಹಕ್ಕೆ ಮುನ್ನುಡಿ ಬರೆದಿದೆ. ನಯನತಾರಾ ಮತ್ತು ಸಮಂತಾ ಇಬ್ಬರೂ ಟಾಲಿವುಡ್ ಸೂಪರ್ ಸ್ಟಾರ್ ನಟಿಯರು. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅಲ್ಲದೇ, ಈಗ ಇಬ್ಬರು ಒಂದೇ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಫೋಟೋಗೆ ಮತ್ತಷ್ಟು ಮಹತ್ವ ಬಂದಿದೆ.

 

ನಯನತಾರಾ ಜತೆ ನಟಿಸುತ್ತಿರುವ ಕುರಿತು ಸಮಂತಾ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಮಂತಾ ಅವರನ್ನು ನಯನತಾರಾ ತಮ್ಮ ತೋಳುಗಳಿಂದ ಅಪ್ಪಿಕೊಂಡಿರುವ, ಇಬ್ಬರೂ ನಗುತ್ತ ಕ್ಯಾಮರಾಗೆ ಪೋಸ್ ಕೊಟ್ಟಿರುವುದನ್ನು ಕಾಣಬಹುದು. ಈ ಪೋಸ್ಟ್ ಗೆ ಸಮಂತಾ, ೨೦:೦೨. ೨೨.೨.೨೦೨೨ ಇದು ವಿಶೇಷ ದಿನವಾಗಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ. ಆದರೂ ಅವರು ನಿಮಗೆ ತಮ್ಮ ಪ್ರೀತಿಯನ್ನು ಕಳುಹಿಸುತ್ತಾರೆ ಎಂದು ಬರೆದು ಶೇರ್ ಮಾಡಿದ್ದಾರೆ.

Leave a Reply

Your email address will not be published.