ನಟಿ ಶ್ರುತಿ ಹರಿಹರನ್ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್..!

ಚಲನಚಿತ್ರ

ನಟಿ ಶ್ರುತಿ ಹರಿಹರನ್​ ಅವರು ಬಹುಭಾಷೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳ ಚಿತ್ರರಂಗದ ಸೆಲೆಬ್ರಿಟಿ ಗಳ ಜೊತೆ ಅವರಿಗೆ ಸ್ನೇಹ ಇದೆ. ಕೆಲವು ವಿವಾದಗಳಿಂದಲೂ ಅವರು ಸುದ್ದಿ ಆಗಿದ್ದುಂಟು. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್​ಫೇರ್​ ಪ್ರಶಸ್ತಿಗಳನ್ನು ಪಡೆದುಕೊಂಡು ಅವರು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಮಾಡಿದ್ದಾರೆ. ಈಗಲೂ ಅವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಈ ನಡುವೆ ಅವರ ಕೆಲವು ಮೆಸೇಜ್​ಗಳು ಡಿಲೀಟ್​ ಆಗಿವೆ. ಸ್ನೇಹಿತರಿಗೆ ಮಾಡಿದ್ದ ಸಂದೇಶಗಳೆಲ್ಲವೂ ರಾತ್ರೋ ರಾತ್ರಿ ಮಾಯ ಆಗಿವೆ.

ಅದಕ್ಕೆ ಕಾರಣ ಹ್ಯಾಕರ್ಸ್​! ಹೌದು, ಹ್ಯಾಕಿಂಗ್ ಕಾಟದಿಂದ ಶ್ರುತಿ ಹರಿಹರನ್​ ಅವರು ಕಿರಿಕಿರಿ ಅನುಭವಿಸಿದ್ದಾರೆ. ಅವರ ಸೋಶಿಯಲ್​ ಮೀಡಿಯಾ ಖಾತೆಗಳ ಮೇಲೆ ಸೈಬರ್​ ಕ್ರೈಂ ಕಿಡಿಕೇಡಿಗಳು ಕಣ್ಣು ಹಾಕಿದ್ದಾರೆ. ಅಲ್ಲದೇ, ಶ್ರುತಿ ಹರಿಹರನ್​ ಅವರ ಖಾತೆಯನ್ನು ಬಳಸಿ ಕೊಂಡು ಇತರೆ ಸೆಲೆಬ್ರಿಟಿಗಳ ಅಕೌಂಟ್​ಗಳನ್ನು ಹ್ಯಾಕ್​ ಮಾಡಲು ಕೂಡ ಪ್ರಯತ್ನಿಸಲಾಗಿದೆ. ಅದೆಲ್ಲ ಹೇಗೆ ನಡೆಯಿತು ಎಂಬುದ ನ್ನು ಶ್ರುತಿ ಹರಿಹರನ್​ ಅವರು ವಿವರಿಸಿದ್ದಾರೆ. ಇತರೆ ಸೆಲೆಬ್ರಿಟಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ಸಂದೇಶ ರವಾನಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಶ್ರುತಿ ಹರಿಹರನ್​ ಅವರು ಆ್ಯಕ್ಟೀವ್​ ಆಗಿರುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 4.8 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಅವರ ಇನ್​ಸ್ಟಾಗ್ರಾಮ್​ ಖಾತೆಯನ್ನು ಕೆಲವು ಕಿಡಿಗೇಡಿಗಳು ಹ್ಯಾಕ್​ ಮಾಡಿದ್ದಾರೆ. ಅಲ್ಲದೇ, ಅವರ ಖಾತೆಯಿಂದ ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಮೆಸೇಜ್​ ಕಳಿಸಿ ಎಲ್ಲ ಖಾತೆಯನ್ನು ಹ್ಯಾಕ್​ ಮಾಡುವ ಪ್ರಯತ್ನ ನಡೆಸಲಾಗಿದೆ. ಹ್ಯಾಕರ್​ಗಳು ಕಳಿಸುವ ಮೆಸೇಜ್​ ಮೇಲೆ ಕ್ಲಿಕ್​ ಮಾಡಿದರೆ ಇನ್​ಸ್ಟಾಗ್ರಾಮ್​ ಖಾತೆ ಕ್ಷಣಾರ್ಧದಲ್ಲಿ ಹ್ಯಾಕ್​ ಆಗಿ ಬಿಡುತ್ತದೆ. ಶ್ರುತಿ ಹರಿಹರನ್​ ಖಾತೆ ಯಿಂದ ನಟಿ ರಮ್ಯಾ ಅವರಿಗೂ ಇಂಥ ಒಂದು ಮೆಸೇಜ್​ ಕಳಿಸಲಾಗಿತ್ತು. ಆದರೆ ಅದರ ಮೇಲೆ ರಮ್ಯಾ ಕ್ಲಿಕ್​ ಮಾಡಿಲ್ಲ. ಹಾಗಾಗಿ ಅವರು ಜಸ್ಟ್​ ಮಿಸ್​ ಆಗಿದ್ದಾರೆ.

Leave a Reply

Your email address will not be published.