ADGP ಬೇನಾಮಿ ಆಸ್ತಿ ಪ್ರಕರಣ: ನಾನು ಯಾವುದೇ ಅಕ್ರಮ ಮಾಡಿಲ್ಲ- ಹುಸ್ಕೂರು ಆನಂದ್ ಸ್ಪಷ್ಟನೆ

ಜಿಲ್ಲೆ

ದೊಡ್ಡಬಳ್ಳಾಪುರ:  ಪಿಎಸ್ಐ ಹಗರಣ ಎಡಿಜಿಪಿ ಅಮೃತ್ ಪೌಲ್ ಬೇನಾಮಿ ಆಸ್ತಿ ಪ್ರಕರಣ, ಇದಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ ಸ್ನೇಹಿತ ಆನಂದ್ ಮನೆ ಮೇಲೆ ದಾಳಿ ಪ್ರಕರಣ,ನಾನು ಯಾವುದೇ ಅಕ್ರಮ ಮಾಡಿಲ್ಲ, ಅಮೃತ್ಪೌಲ್ ಬೇನಾಮಿ ನಾನಲ್ಲ ಎಂದು ಹುಸ್ಕೂರು ಆನಂದ್ ಸ್ಪಷ್ಟನೆ ನೀಡಿದ್ದಾರೆ. ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರೋ ಎಡಿಜಿಪಿ ಅಮೃತ್ಪೌಲ್ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.

ಇನ್ನೂ ಅಮೃತ್ಪೌಲ್ ಬೇನಾಮಿ ಆಸ್ತಿ ಮಾಡಿರೋ ಶಂಕೆ ಹಿನ್ನಲೆ ಕಳೆದ ಮೂರು ದಿನಗಳಿಂದೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ ಹುಸ್ಕೂರು ಆನಂದ್ ಎಂಬುವವರ ಮನೆ ಮೇಲೆ ಸಿಐಡಿ ದಾಳಿ ನಡೆಸಿತ್ತು. ಇನ್ನೂ ಅಮೃತ್ಪೌಲ್ ಸ್ನೇಹಿತರಾಗಿರೋ ಹುಸ್ಕೂರು ಆನಂದ್ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದ ಸಿಐಡಿ ದಾಖಲೆಗಳ ಪರಿಶೀಲನೆ ನಡೆಸಿತ್ತು. ಇದರ ಅಂಗವಾಗಿ ಪತ್ರಿಕಾಘೋಷ್ಟಿ ನಡೆಸಿದ ರಿಯಲ್ ಎಸ್ಟೆಟ್ ಉದ್ಯಮಿ ಹುಸ್ಕೂರು ಆನಂದ್ ಸಿಐಡಿ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಅಮೃತ್ಪೌಲ್ ಹಾಗೂ ನನಗೆ 2016 ರಲ್ಲಿ ಪರಿಚಯವಾಗಿ, ಅವರಿಗೆ 3 ಎಕರೆ ಜಮೀನು ಕೊಡಿಸಿದ್ದೆ,

ಇದರಿಂದಾಗಿ ನನಗೂ ಅವರಿಗೂ ಸ್ನೇಹ ಬೆಳೆದಿತ್ತು. ಆದ್ರೆ ಅವರ ಬೇನಾಮಿ ನಾನಲ್ಲ, ನಾನು ಯಾವುದೇ ಅಕ್ರಮ ಮಾಡಿಲ್ಲ ಎಂದಿದ್ದಾರೆ. ಜತೆಗೆ ಅಮೃತ್ ಪೌಲ್ ಬೇನಾಮಿ ಆಸ್ತಿಗೂ ನನಗೂ ಸಂಬಂಧವಿಲ್ಲ, ನಾನು ಕೃಷಿಕನಾಗಿದ್ದು, ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿದ್ದೇನೆ. ಸಿಐಡಿ ದಾಳಿ ನಡೆಸಿ ನಮ್ಮ ಮನೆಯವರೆಲ್ಲರನ್ನು ವಿಚಾರಿಸಿದ್ದಾರೆ ಅಷ್ಟೆ. ಮೂರು ದಿನಗಳ ಕಾಲ ನಮ್ಮನ್ನ ವಿಚಾರಣೆ ಮಾಡಿದ್ದು, ಎಲ್ಲಾ ದಾಖಲೆಗಳನ್ನು ನಾನು ಸಿಐಡಿಗೆ ನೀಡಿದ್ದೇನೆ. ಯಾವುದೇ ಸಂದರ್ಭದಲ್ಲಾದ್ರೂ ವಿಚಾರಣೆಗೆ ಹೋಗ್ತೇನೆ ಅಂತಾ ಆನಂದ್ ಹೇಳಿದ್ದಾರೆ. ನನ್ನ ಆಸ್ತಿ ನ್ಯಾಯಯುತವಾಗಿದ್ದು,

ಯಾವುದೇ ಬೇನಾಮಿ ಇಲ್ಲ. ಜಮೀನು ಕೊಡಿಸಿದ್ದಾಗಿನಿಂದ ನಮ್ಮ ಮನೆಯ ಸಮಾರಂಭಕ್ಕೆ ಬಂದು ಹೋಗಿದ್ದಾರೆ. ನನ್ನ ಕೆಲಸಕ್ಕೆ ಯಾವತ್ತೂ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಳಸಿಕೊಂಡಿಲ್ಲ. ರೈತರ ಸಮಸ್ಯೆಗಳಿಗೆ ಮಾತ್ರ ಅಮೃತ್ ಪಾಲ್ ಅವರಿಗೆ ಪೋನ್ ಮಾಡಿ ರೆಕಮೆಂಡ್ ಮಾಡ್ತಿದ್ದೆ ಅಷ್ಟೆ ಅಂತಾ ತಿಳಿಸಿದ್ದಾರೆ. ಇನ್ನೂ 2012 ರಲ್ಲೆ 83 ಎಕರೆ ಆಸ್ತಿ ಇರೋ ಬಗ್ಗೆ ಮಾಡ್ಗೇಜ್ ಹಾಗಿದೆ. ಆದರೆ ಕೆಲವರು ಅಮೃತ್ಪೌಲ್ ಬೇನಾಮಿ ಅಂತಾ ಬಿಂಬಿಸಿದ್ದಾರೆ, ಅವರು ಪರಿಚಯವಾಗಿದ್ದೆ 2016 ರಲಲಿ ಅಂತಾ ಸಿಐಡಿ ದಾಳಿ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ.

Leave a Reply

Your email address will not be published.