ತನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತದ ಲೈಂಗಿಕ ಕ್ರಿಯೆ: ಗಂಡನ ಮರ್ಮಾಂಗ ಕತ್ತರಿಸಿದ ಪತ್ನಿ

ರಾಷ್ಟ್ರೀಯ

ಭೂಪಾಲ್: ಪ್ರತಿ ರಾತ್ರಿಯೂ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಗಂಡನ ಕಾಟ ತಾಳಲಾರದೆ ಕೋಪದಿಂದ ಹೆಂಡತಿ ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ ಟಿಕಮ್‌ಗಢದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಂಡ ದಿನವೂ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರಿಂದ ಆತನ ಹೆಂಡತಿ ಕಳೆದ ವಾರ ತನ್ನ 26 ವರ್ಷದ ಪತಿಯ ಜನನಾಂಗವನ್ನು ಕತ್ತರಿಸಿ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾತಾರಾ ಪೊಲೀಸ್ ಠಾಣೆಯ ಉಸ್ತುವಾರಿ ತ್ರಿವೇಂದ್ರ ತ್ರಿವೇದಿ ನೀಡಿರುವ ಮಾಹಿತಿ ಪ್ರಕಾರ, ಒಬ್ಬ ವ್ಯಕ್ತಿ ಭಾನುವಾರ ಪೊಲೀಸ್ ಠಾಣೆಗೆ ಫೋನ್ ಮಾಡಿ ತನ್ನ ಹೆಂಡತಿ ತನ್ನ ಗುಪ್ತಾಂಗವನ್ನು ಕಟ್ ಮಾಡಿದ್ದಾಳೆ ಎಂದು ದೂರು ನೀಡಿದ್ದ. ನಾನು ನನ್ನ 24 ವರ್ಷದ ಹೆಂಡತಿ ಜೊತೆ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಿಸಿದಾಗ ಆಕೆ ನಿರಾಕರಿಸಿದಳು. ಬಲವಂತವಾಗಿ ಆಕೆಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ಯತ್ನಿಸಿದ್ದರಿಂದ ನನ್ನ ಹೆಂಡತಿ ನನ್ನ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ದೂರಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.