ಏಳು ವರ್ಷಗಳಲ್ಲಿ ರೈತರಿಗೆ ನೀಡುವ ಕೃಷಿ ಸಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ: ಪ್ರಧಾನಿ ಮೋದಿ

ರಾಷ್ಟ್ರೀಯ

ನವದೆಹಲಿಕೃಷಿ ಕ್ಷೇತ್ರವನ್ನು ಮತ್ತಷ್ಟು ಆಧುನೀಕರಣ ಮಾಡಲು ಜೊತೆಗೆ ಸ್ಮಾರ್ಟ್ ಮಾಡಲು 2022-23ರ ಕೇಂದ್ರ ಹಣಕಾಸು ಬಜೆಟ್​ನಲ್ಲಿ ಗಮನ ಹರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ಮಾರ್ಟ್ ಕೃಷಿ ಕುರಿತು ವೆಬಿನಾರ್​ನಲ್ಲಿ ಮಾತನಾಡಿದ ಅವರು ಕೃಷಿ ವಲಯ ಬಲಪಡಿಸಲು ಬಜೆಟ್​ನಲ್ಲಿ ನೀಡಿದ ಕೊಡುಗೆಗಳ ಬಗ್ಗೆ ಚರ್ಚಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಇಡೀ ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ.

ಬೀಜ ಪೂರೈಕೆಯಿಂದ ಮಾರುಕಟ್ಟೆಯವರೆಗೆ ಫಸಲನ್ನು ತಲುಪಿಸಲು ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ ಎಂದಿದ್ದಾರೆ. ಹಳೆಯ ವ್ಯವಸ್ಥೆಗಳ ಸುಧಾರಣೆಗೆ ಪ್ರಯತ್ನಿಸಲಾಗಿದೆ. ಕೇವಲ ಆರು ವರ್ಷಗಳಲ್ಲಿ ಕೃಷಿ ಬಜೆಟ್ ಹಲವಾರು ಪಟ್ಟು ಹೆಚ್ಚಾಗಿದೆ ಮತ್ತು ಏಳು ವರ್ಷಗಳಲ್ಲಿ ರೈತರಿಗೆ ನೀಡುವ ಕೃಷಿ ಸಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ ಎಂದು ಮೋದಿ ಸ್ಪಷ್ಟನೆ ನೀಡಿದರು.

ಬಜೆಟ್‌ನಲ್ಲಿ ಕೃಷಿಯನ್ನು ಆಧುನಿಕ ಮತ್ತು ಸ್ಮಾರ್ಟ್ ಮಾಡಲು ಏಳು ಪ್ರಮುಖ ಮಾರ್ಗಗಳನ್ನು ಸೂಚಿಸಲಾಗಿದೆ. ಗಂಗಾನದಿಯ ಎರಡೂ ಬದಿಗಳಲ್ಲಿ 5 ಕಿಲೋ ಮೀಟರ್​ ಅಗಲದ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ. ನೈಸರ್ಗಿಕ ಕೃಷಿ, ಆಧುನಿಕ ತಂತ್ರಜ್ಞಾನ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದಿದ್ದಾರೆ.

Leave a Reply

Your email address will not be published.