ಮಹಾಶಿವರಾತ್ರಿ ಪ್ರಯುಕ್ತ ಶಿವ ದೇವಾಲಯಗಳಿಗೆ ಹರಿದ್ವಾರದಿಂದ ತಂದ ಗಂಗಾಜಲ ವಿತರಣೆ

Uncategorized

ಬೆಂಗಳೂರು: ಬಳೆಪೇಟೆಯ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯ ಅವರಣದಲ್ಲಿ ಹರಿದ್ವಾರದಿಂದ ತಂದ ಗಂಗಾಜಲವನ್ನು ಭಕ್ತರಿಗೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಹರ್ಷಿ ಆನಂದ್ ಗುರೂಜೀರವರು ಹಾಗೂ ಮಾಜಿ ಸಚಿವರಾದ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರು ಉದ್ಘಾಟಿಸಿ ಸುಮಾರು ಎರಡು ಸಾವಿರ ಭಕ್ತರಿಗೆ ಗಂಗಾಜಲವನ್ನು ವಿತರಿಸಿದರು.

ಇದೇ ವೇಳೆ ಮಾತನಾಡಿದ ಆನಂದ್ ಗುರೂಜಿ ಅವರು, ಸಕಲ ಸಂಕಷ್ಟಗಳ ನಿವಾರಣೆ ಶಿವಾನುಗ್ರಹ ಮುಖ್ಯ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹರಿದ್ವಾರದಿಂದ ಗಂಗಾಜಲ ತರಿಸಿ, ಭಕ್ತರಿಗೆ ನೀಡಲಾಗುತ್ತಿದೆ. ಗಂಗಾಸ್ನಾನ ತುಂಗಾಪಾನ ಎನ್ನುವಂತೆ ಜನರು ಕಾಶಿಗೆ ಭೇಟಿ ನೀಡಬೇಕು. ರಾಜ್ಯದಲ್ಲಿ ಜಲಕ್ಷಾಮ ಬರದಿರಲಿ ಎಂದು ಗಂಗಾಪೂಜೆ, ಗಂಗಾರತಿ ಪೂಜೆ ನೇರವೆರಿಸಲಾಗಿದೆ. ಸರ್ವೆ ಜನಾಃ ಸುಖಿನೋ ಭವಂತುಃ ಮಹಾಶಿವರಾತ್ರಿ ದಿನ ಶಿವನ ಧ್ಯಾನ ಮಾಡಿ ನಿಮ್ಮ ಸಂಕಷ್ಟಗಳು ನಿವಾರಣೆಯಾಗಲಿದೆ ಎಂದು ಹೇಳಿದರು.

ಬಳಿಕ ಮಾಲೂರು ಕೃಷ್ಣಯ್ಯ ಶೆಟ್ಟಿರವರು ಮಾತನಾಡಿ, ನಾನು ಮುಜರಾಯಿ ಸಚಿವನಾಗಿದ್ದಾಗ 2008ರಿಂದ ರಾಜ್ಯದ ಜನತೆಗೆ ಕೊಟ್ಟ ಮಾತಿನ ಪ್ರಕಾರ, ಮಹಾ ಶಿವರಾತ್ರಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹರಿದ್ವಾರದಿಂದ ಪವಿತ್ರ ಗಂಗಾಜಲವನ್ನು ತರಿಸಿ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ.

ಮುಜರಾಯಿ ಇಲಾಖೆಯವರು ಜಿಲ್ಲಾಧಿಕಾರಿಗಳಿಂದ ಗಂಗಾಜಲವನ್ನು ಸ್ವೀಕರಿಸಿ ಜಿಲ್ಲೆಯ ದೇವಾಲಯಗಳಿಗೆ ತಲುಪಿಸುತ್ತಾರೆ. ರಾಜ್ಯದ ಪುರಾತನ ಶಿವನ ದೇವಾಲಯಗಳಿಗೆ ಸರಿ ಸುಮಾರು 3೦೦೦ ದೇವಾಲಯಗಳಲ್ಲಿ ಶಿವನ ಮೂರ್ತಿಗೆ ಅಭಿಷೇಕ ಮತ್ತು ತೀರ್ಥ ವಿನಿಯೋಗಕ್ಕಾಗಿ ಎಲ್ಲಾ ಭಕ್ತಾದಿಗಳಿಗೆ ವಿತರಿಸಲಾಗುತ್ತಿದೆ.ಹಿಂದೂವಾಗಿ ಹುಟ್ಟಿ, ಹಿಂದೂಗಳ ಸೇವೆ ಮಾಡುವ ಪುಣ್ಯ ನನ್ನದು ಎಂದು ಹೇಳಿದರು.

Leave a Reply

Your email address will not be published.