Allu Arjun .. 10 ಕೋಟಿ ಕೊಟ್ರೂ ಈ ಜಾಹೀರಾತು ಮಾಡಲ್ಲ ಎಂದ ಅಲ್ಲು ಅರ್ಜುನ್..! ಯಾಕೆ ಗೊತ್ತಾ..?

ಚಲನಚಿತ್ರ

ಅಲ್ಲು ಅರ್ಜುನ್ ಅವರು ಸ್ಟೈಲಿಶ್ ಸ್ಟಾರ್ ಎಂಬ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ‘ಪುಷ್ಪ’ ಚಿತ್ರ ತೆರೆಕಂಡ ಬಳಿಕ ಬಾಲಿವುಡ್​​ನಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಈ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಕೇವಲ ಸಿನಿಮಾ ಮಾತ್ರವಲ್ಲದೆ ಜಾಹೀರಾತು ಕ್ಷೇತ್ರಗಳಿಂದಲೂ ಅಲ್ಲು ಅರ್ಜುನ್​ ಗೆ ಹಲವು ಅವಕಾಶಗಳು ಹರಿದುಬರುತ್ತಿವೆ. ಆದರೆ, ಅವರು ಒಂದು ಜಾಹೀರಾತಿನಲ್ಲಿ ನಟಿಸಲು ನೋ ಎಂದಿದ್ದಾರೆ.

ಈ ವಿಚಾರ ಫ್ಯಾನ್ಸ್ ಕಿವಿಗೂ ಬಿದ್ದಿದೆ. ಈ ಬಗ್ಗೆ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅಲ್ಲು ಅರ್ಜುನ್​​ ಈಗಾಗಲೇ ಹಲವು ಜಾಹೀರಾತುಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಅವರು ಜೊಮ್ಯಾಟೋ ಆ್ಯಡ್​ನಲ್ಲಿ ಮಿಂಚಿದ್ದರು. ಇತ್ತೀಚೆಗೆ ತಂಬಾಕು ಹಾಗೂ ಮದ್ಯ ಕಂಪನಿಯೊಂದರ ಅಡ್ವಟೈಸ್​ಮೆಂಟ್​ನಲ್ಲಿ ನಟಿಸಲು ಸ್ಟೈಲಿಶ್​ ಸ್ಟಾರ್​​ಗೆ ಆಫರ್ ನೀಡಲಾಗಿತ್ತು. ಸಂಭಾವನೆ ಜತೆಗೆ ಬೋನಸ್​ ಕೊಡುವುದಾಗಿಯೂ ಕಂಪನಿ ಹೇಳಿತ್ತು.

ಆದರೆ, ಹಣದ ಆಸೆಗೆ ಬೀಳದೆ ಅಲ್ಲು ಅರ್ಜುನ್ ಅವರು ಈ ಆಫರ್ ತಿರಸ್ಕರಿಸಿದ್ದಾರೆ. ಅಲ್ಲು ಅರ್ಜುನ್ ಪ್ರತಿ ಜಾಹೀರಾತಿಗೆ 7.5 ಕೋಟಿ ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಾರೆ ಎನ್ನಲಾಗಿದೆ. ತಂಬಾಕು ಹಾಗೂ ಮದ್ಯದ ಕಂಪನಿಯವರು ಈ ಸಂಭಾವನೆಯ ಜತೆಗೆ 2.5 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಕೊಡುವ ಆಫರ್ ನೀಡಿದ್ದರು. ಆದರೆ, ಇದಕ್ಕೆ ಅಲ್ಲು ಅರ್ಜುನ್ ನೋ ಎಂದಿದ್ದಾರೆ.

ತಂಬಾಕು, ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಸೆಲೆಬ್ರಿಟಿಗಳನ್ನು ಹಿಂಬಾಲಿಸುವವರು ಅನೇಕರು ಇರುತ್ತಾರೆ. ಹೀಗಾಗಿ ಸ್ಟಾರ್​ಗಳು ಈ ರೀತಿ ಜಾಹೀರಾತು ಮಾಡದಿರಲಿ ಎಂದು ಫ್ಯಾನ್ಸ್ ಬಯಸುತ್ತಾರೆ. ಆದಾಗ್ಯೂ ಈ ರೀತಿಯ ಜಾಹೀರಾತಿನಲ್ಲಿ ನಟ/ನಟಿಯರು ಕಾಣಿಸಿಕೊಂಡರೆ ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಾರೆ. ಈಗ ಅಲ್ಲು ಅರ್ಜುನ್ ಅವರು ಈ ಜಾಹೀರಾತನ್ನು ರಿಜೆಕ್ಟ್ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.

Leave a Reply

Your email address will not be published.