ಅಮರನಾಥ್ ಮೇಘಸ್ಫೋಟ; 16 ಯಾತ್ರಾರ್ಥಿಗಳು ಸಾವು – ಮುಂದುವರೆದ ರಕ್ಷಣಾ ಕಾರ್ಯಾಚರಣೆ

ರಾಷ್ಟ್ರೀಯ

ಶ್ರೀನಗರ : ದಕ್ಷಿಣ ಕಾಶ್ಮೀರದ ಅಮರನಾಥ ಗುಹೆಯ ಬಳಿ ಸಂಭವಿಸಿದ ಮೇಘಸ್ಪೋಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರತಿಯೊಂದು ವಿಡಿಯೋಗಳು ಕೂಡ ಸ್ಥಳದಲ್ಲಿನ ಭೀಕರ ಸ್ಥಿತಿ ಚಿತ್ರಣ ನೀಡಿದೆ. ಭಾರೀ ಪ್ರವಾಹದಲ್ಲಿ ಹಲವು ಭಕ್ತರು ಕೊಚ್ಚಿ ಹೋಗಿದ್ದಾರೆ. ಇದುವರೆಗೆ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಅವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಐಟಿಬಿಪಿ ಮತ್ತು ಎನ್‌ಡಿಆರ್‌ಎಫ್‌  ತಂಡಗಳು ಸ್ಥಳದಲ್ಲಿ ನಿಂತಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ತಡರಾತ್ರಿಯವರೆಗೂ ಮುಂದುವರಿದಿತ್ತು. ಶನಿವಾರ ಬೆಳಗ್ಗೆಯಿಂದ ಮತ್ತೊಮ್ಮೆ ಕಾರ್ಯಾಚರಣೆ ಚುರುಕುಗೊಳಿಸ ಲಾಗುತ್ತಿದೆ. ಶನಿವಾರ ಭಾರತೀಯ ಸೇನೆ ತನ್ನ ರಕ್ಷಣಾ ಕಾರ್ಯಾಚರಣೆ ಚುರುಕು ಮಾಡಿದ್ದು, ಸೇನಾ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗಿದೆ.

Leave a Reply

Your email address will not be published.