Home District ಕೊರೊನಾ ವೈರಸ್​ ಕುರಿತು ರೆಬಲ್​ ಸ್ಟಾರ್ ಅಂಬರೀಶ್ ಅಭಿಮಾನಿಯಿಂದ ವಿಶೇಷ ಜಾಗೃತಿ

ಕೊರೊನಾ ವೈರಸ್​ ಕುರಿತು ರೆಬಲ್​ ಸ್ಟಾರ್ ಅಂಬರೀಶ್ ಅಭಿಮಾನಿಯಿಂದ ವಿಶೇಷ ಜಾಗೃತಿ

184
0
SHARE

ಬಳ್ಳಾರಿ. – ಕೊರೊನಾ ವೈರಸ್ ವಿರುದ್ಧ ರಾಜ್ಯ ಸರಕಾರ ಮತ್ತು ಆಯಾ ಜಿಲ್ಲಾಡಳಿತ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ. ಇದಕ್ಕೆ ಪೂರಕವಾಗಿ ಗಣಿನಾಡು ಬಳ್ಳಾರಿಯಲ್ಲಿ ರೆಬಲ್ ಸ್ಟಾರ್‌ ಅಂಬರೀಶ್ ಅಭಿಮಾನಿಯೊಬ್ಬರು ಸಹ ವಿಶಿಷ್ಟವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ವೈರಸ್​ ಕುರಿತು ರೆಬಲ್​ ಸ್ಟಾರ್ ಅಭಿಮಾನಿಯಿಂದ ವಿಶೇಷ ಜಾಗೃತಿಯ ಅಣಕು ಪ್ರದರ್ಶನ ಮಾಡಿದ್ದಾರೆ. ಚೀನಾ ದೇಶದಿಂದ ಬಂದಿರುವ ನಾನು, ಭಾರತೀಯರನ್ನ ಎಚ್ಚರಿಸಲು‌ ಬಂದಿರುವೆ ಎನ್ನುವ ವೈರಸ್ ವೇಷಧಾರಿ,  ಕಡ್ಡಾಯ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಸಾಕು ನಿಮ್ಮನ್ನ ಬಿಟ್ಟು ತೊಲಗುವೆ ಎಂದು ಹೇಳಿ ಅಣುಕು ಪ್ರದರ್ಶನ ಮಾಡುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಗ್ಗೂರು ಗ್ರಾಮದ ಯುವಕ ಅಮರೇಶ ಹೂಗಾರ ಅವರು, ದಿವಗಂತ ರೆಬಲ್​ ಸ್ಟಾರ್​ ಅಂಬರೀಶ್ ಅವರ ಅಪ್ಪಟ​ ಅಭಿಮಾನಿಯಾಗಿದ್ದಾರೆ. ಅಷ್ಟೆ ಅಲ್ಲದೇ  ಸುಮಲತಾ ಅಂಬರೀಶ್​ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ,  ಬಳ್ಳಾರಿ ಅಧಿದೇವತೆ ಕನಕ ದುರ್ಗಮ್ಮ ದೇಗುಲಕ್ಕೆ ಬಾಗಿನ ಅರ್ಪಿಸಿದ ಬಳಿಕ ಜನಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಚೀನಾ ದೇಶದಿಂದ ಬಂದಿರುವ ನಾನು, ಭಾರತೀಯರನ್ನ ಎಚ್ಚರಿಸಲು‌ ಬಂದಿರುವೆ ಎನ್ನುವ ವೈರಸ್ ವೇಷಧಾರಿಯಾಗಿ ಜನರಿಗೆ ಎಚ್ಚರಿಸುವ ಜೊತೆಗೆ ಜಾಗೃತಿ ಮೂಡಿಸುತ್ತಿದ್ದಾರೆ.

 

LEAVE A REPLY

Please enter your comment!
Please enter your name here