ಅಮಿತ್ ಶಾ ನಿರ್ಧಾರವೇ ಅಂತಿಮ, ನನ್ನದು ಸಲಹೆ ಮಾತ್ರ: ಯೂಟರ್ನ್ ಹೊಡೆದ ಬಿಎಸ್ ಯಡಿಯೂರಪ್ಪ

ಬೆಂಗಳೂರು

ಬೆಂಗಳೂರು: ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಯೂಟರ್ನ್ ಹೊಡೆದಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ನೀಡಿದ ಹೇಳಿಕೆ ಸಾಕಷ್ಟು‌ ಗೊಂದಲವಾಗಿದೆ. ಶಿಕಾರಿಪುರದ ಕಾರ್ಯಕರ್ತರು ನನ್ನನ್ನೇ‌ ನಿಲ್ಲುವಂತೆ ಒತ್ತಾಯಿಸಿದ್ದಾರೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ನಡ್ಡಾ,‌ ಅಮಿತ್ ಶಾ‌ ನಿರ್ಧಾರವೇ ಅಂತಿಮ. ನನ್ನದು ಸಲಹೆ‌ ಮಾತ್ರ. ಕಾರ್ಯಕರ್ತರು, ಮುಖಂಡರಿಗೆ ಗೊಂದಲ‌ ಬೇಡ. ಅಂತಿಮ ತೀರ್ಮಾನ ಪ್ರಧಾನಿ

ನಡ್ಡಾ ತೆಗೆದುಕೊಳ್ಳಬೇಕು. ಹಳೇ ಮೈಸೂರು ಭಾಗವಾದರೂ ಸರಿ, ಎಲ್ಲಾದರೂ‌ ಸರಿ. ವರಿಷ್ಠರು‌‌ ಹೇಳಿದ‌ ಕಡೆ‌ ವಿಜಯೇಂದ್ರ ಸ್ಪರ್ಧೆ. ಯಡಿಯೂರಪ್ಪಗೆ ಸಾಕಷ್ಟು ಅವಕಾಶ ನೀಡಿದ್ದಾರೆ. ರಾಜ್ಯಾಧ್ಯಕ್ಷ, ಸಿಎಂ ಎಲ್ಲವನ್ನೂ ಕೊಟ್ಟಿದ್ದಾರೆ. ಮತ್ತೆ 22, 23 ಲೋಕಸಭೆ ಸೀಟ್ ಗೆಲ್ಲಬೇಕು. ಮೋದಿಯವರನ್ನ ಮತ್ತೆ ಪ್ರಧಾನಿ ಮಾಡಬೇಕು ಎಂದಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ವಿಜಯೇಂದ್ರ ಭಾಗಿ ಆರೋಪಕ್ಕೆ ಪ್ರತಿಕ್ರಿಯಿಸಿ, ತಾನು ಕಳ್ಳ, ಪರರ‌ನ್ನೂ ನಂಬು, ಇದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published.