Home Elections 2018 ಕೈಗೆ ಸೆಡ್ಡು ಹೊಡೆಯಲು ‘ಚಾಣಕ್ಯ’ನ ‘ಧರ್ಮ ಸೂತ್ರ’,ಧರ್ಮ ಇಬ್ಭಾಗ ಕಾಂಗ್ರೆಸ್ ಷಡ್ಯಂತ್ರ ಎಂದ ಅಮಿತ್ ಶಾ.

ಕೈಗೆ ಸೆಡ್ಡು ಹೊಡೆಯಲು ‘ಚಾಣಕ್ಯ’ನ ‘ಧರ್ಮ ಸೂತ್ರ’,ಧರ್ಮ ಇಬ್ಭಾಗ ಕಾಂಗ್ರೆಸ್ ಷಡ್ಯಂತ್ರ ಎಂದ ಅಮಿತ್ ಶಾ.

87
0
SHARE

ರಾಜ್ಯ ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ , ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆಯಲ್ಲಿ ರಣಕಹಳೆ ಮೊಳಗಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನ ಬಿಟ್ಟ ಚಾಣಕ್ಯ ಚುನಾವಣಾ ಅಖಾಡಕ್ಕೆ ಪಂಥಹ್ವಾನ ನೀಡಿದ್ದಾರೆ.ಲಿಂಗಾಯತರಿಗೆ ಪ್ರತ್ಯೇಕ ಸ್ಥಾನ ಮಾನ ವಿಚಾರದಲ್ಲಿ ರಾಜ್ಯಸರ್ಕಾರದ ಲೆಕ್ಕಚಾರವನ್ನೇ ಅಸ್ತ್ರವನ್ನಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕಾಂಗ್ರೆಸ್ ವಿರುದ್ಧ ಬಾಣ ಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿವಯೋಗಮಂದಿರಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಸಂತರ ಜೊತೆ ಸಂವಾದ ನಡೆಸಿ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

 

ವೀರಶೈವ ಲಿಂಗಾಯತ ಸಮಾಜ ಒಡೆಯಲು ಬಿಡೋದಿಲ್ಲ ಎಂದು ಷಾ ಹೇಳಿದ್ದಾರೆ. ಸಮಾಜ ಒಡೆಯುತ್ತಿರುವವರ ಕಾರ್ಯ ಸಫಲವಾಗೋದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ನಿಮ್ಮಿಂದ ನಾನು ಏನೂ ಅಪೇಕ್ಷಿಸೋದಿಲ್ಲ.ನಿಮ್ಮ ಆಶೀರ್ವಾದ ಒಂದಿದ್ದರೆ ಸಾಕು ಎಂದು ಅಮಿತ್ ಷಾ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರ ಈ ಮಾತು ವೀರಶೈವಲಿಂಗಾಯತ ಹೋರಾಟಗಾರರಿಗೆ ಶಕ್ತಿ ತುಂಬಿದಂತಾಗಿದೆ. ಅದರಲ್ಲೂ ಪಂಚಪೀಠಾಧೀಶ್ವರರು ಮತ್ತು ವಿರಕ್ತಮಠಾಧೀಶರಿಗೆ ಆನೆ ಬಲ ಸಿಕ್ಕಂತಾಗಿದೆ. ಸರಕಾರ ಯಾವುದೇ ಆಡಳಿತದಲ್ಲಿರಲಿ ಎಲ್ಲಿಯವರೆಗೆ ಬಿಜೆಪಿ ಪಕ್ಷ ಇರುತ್ತೊ ಧರ್ಮ ವಿಭಜನೆಗೆ ಬಿಡೋದಿಲ್ಲ ಅಂತಾ ಅಮಿತ್ ಶಾ ವೀರಶೈವರ ಪರ ಬ್ಯಾಟಿಂಗ್ ಮಾಡಿದ್ದಾರೆ..

 

ಇದಕ್ಕೂ ಮೊದಲು ಹಾವೇರಿ ಜಿಲ್ಲೆ ಕಾಗಿನೆಲೆಯ ಕನಕಪೀಠಕ್ಕೆ ಭೇಟಿ ನೀಡಿದ ಅಮಿತ್ ಶಾ ರಾಜ್ಯದ ನಾಲ್ಕು ಕನಕ ಪೀಠದ ಸ್ವಾಮೀಜಿಗಳ ಆಶಿರ್ವಾದ ಪಡೆದ್ರು. ಬಳಿಕ ಓಬಿಸಿ ಸಮಾವೇಶದಲ್ಲಿ ಮಾತನಾಡಿದ ಷಾ ತಮ್ಮ ಭಾಷಣದುದ್ದಕ್ಕೂ ಸರ್ಕಾರಕ್ಕೆ ನೀರಿಳಿಸಿದ್ರೆ ವರತು ಬೇರೆನೂ ಮಾತನಾಡಲೇ ಇಲ್ಲ. ಸರ್ಕಾರವನ್ನ ಬಗ್ಗುಬಡಿಯಲು ಬಿಜೆಪಿ ಕಾರ್ಯಕರ್ತರ ಹತ್ಯೆ ವಿಚಾರವನ್ನ ಬಾಣವನ್ನಾಗಿ ಬಿಟ್ಟ ಚಾಣಕ್ಯ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಿದವರನ್ನು ಪಾತಾಳಕ್ಕೆ ಹೋದರು ಬಿಡೊಲ್ಲ ಅಂತಾ ಗುಡುಗಿದ್ರು. ಅಲ್ಲದೆ, ಹಿಂದುಳಿದವರ್ಗಕ್ಕೆ ಸಿದ್ದರಾಮಯ್ಯ ಚಾಂಪಿಯನ್ ಅಲ್ಲಾ ಅಂತಾ ವಾಗ್ದಾಳಿ ನಡೆಸಿದ್ರು.

ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವ ಮೂಲಕ ಬಿಜೆಪಿ ನಾಯಕರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ರಯತ್ನ ನಡೆಸಿದರು. ಶಿವಯೋಗಿ ಮಂದಿರದಲ್ಲಿ ಪಂಚಾಚಾರ್ಯ ಪ್ರಮುಖರ ಸಭೆ, ಹಾವೇರಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಕನಕಗುರುಪೀಠಕ್ಕೆ ಭೇಟಿ ನೀಡುವ ಮೂಲಕ, ಮತ ಕ್ರೂಢೀಕರಣಕ್ಕೆ ಯತ್ನ ನಡೆಸಿದ್ರು.

LEAVE A REPLY

Please enter your comment!
Please enter your name here