
ಕಾಂಗ್ರೆಸ್ ಸದಸ್ಯತ್ವದ ನೋಂದಣಿ ಅಭಿಯಾನಕ್ಕೆ ಮಾರ್ಚ್ 31 ರ ಗಡುವು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು : ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವದ ನೋಂದಣಿ ಅಭಿಯಾನವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಅಭಿಯಾನಕ್ಕೆ ಮಾರ್ಚ್ 31 ರಂದು ಒಂದೂವರೆ ತಿಂಗಳು ಪೂರೈಸಿದ್ದು, ಅಂದೇ ನೋಂದಣಿ ಅಭಿಯಾನ ಕೊನೆಗೊಳ್ಳಲಿದೆ. ಹೀಗಾಗಿ ಮಾರ್ಚ್ 31ರ ಒಳಗೆ ಸದಸ್ಯರಾಗುವವರಿಗೆ ಮಾತ್ರ ಮುಂಬರುವ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಮತ ಚಲಾಯಿಸುವ ಅವಕಾಶ ಸಿಗಲಿದೆ. ಸದಸ್ಯತ್ವ ಎಲ್ಲರ ಹಕ್ಕು. ಬನ್ನಿ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಳ್ಳಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.