ವಿಶ್ವದ ಅತ್ಯಂತ ಭಾರದ ಸ್ಟ್ರಾಬೆರಿ ಬೆಳೆದು ಗಿನ್ನೆಸ್ ದಾಖಲೆಗೆ ಭಾಜನರಾದ ಇಸ್ರೇಲ್ ವ್ಯಕ್ತಿ..!

ಅಂತರಾಷ್ಟ್ರೀಯ

ಇಸ್ರೇಲ್‌: ಇಸ್ರೇಲ್‌ನ ರೈತರೊಬ್ಬರು ಅತೀ ದೊಡ್ಡ ಸ್ಟ್ರಾಬೆರಿ ಬೆಳೆದು ಗಿನ್ನಿಸ್‌ ವಿಶ್ವದಾಖಲೆಯ ಪುಟ ಸೇರಿದ್ದಾರೆ. ಈ ಸ್ಟ್ರಾಬೆರಿ 289 ಗ್ರಾಂ ತೂಕವಿದ್ದು,ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಎಂಬ ಹೆಗ್ಗಳಿಕೆ ಗಳಿಸಿದೆ. ಇದು 18 ಸೆಂಟಿಮೀಟರ್ ಉದ್ದ, 4 ಸೆಂಟಿ ಮೀಟರ್ ದಪ್ಪ ಇದೆ ಹಾಗೂ 34 ಸೆಂಟಿಮೀಟರ್ ಸುತ್ತಳತೆಯನ್ನು ಹೊಂದಿದೆ. ಇಸ್ರೇಲ್‌ನ ಏರಿಯಲ್ ಚಾಹಿ ಎಂಬುವರ ಕುಟುಂಬವು ಈ ಭಾರಿ ಗಾತ್ರದ ಸ್ಟ್ರಾಬೆರಿಯನ್ನು ಬೆಳೆದಿದೆ.

ಈ ಸ್ಟ್ರಾಬೆರಿಯು ಇಲಾನ್ ಜಾತಿಗೆ ಸೇರಿದ ಸ್ಟ್ರಾಬೆರಿಯಾಗಿದ್ದು, ಇಸ್ರೇಲ್‌ನ ಕಡಿಮಾ ಜೋರಾನ್‌ನಲ್ಲಿರುವ ಏರಿಯಲ್ ಅವರ ಕುಟುಂಬದ  ‘ಸ್ಟ್ರಾಬೆರಿ ಇನ್ ದಿ ಫೀಲ್ಡ್‌ ಹೆಸರಿನ ಫಾರ್ಮ್‌ನಲ್ಲಿ ಇದು ಬೆಳೆದಿದೆ.ಇಲಾನ್ ವಿಧದ ಸ್ಟ್ರಾಬೆರಿಗಳನ್ನು ಮೂಲತಃ ಇಸ್ರೇಲ್‌ನ ಕೃಷಿ ಸಂಶೋಧನಾ ಸಂಸ್ಥೆಯ ಸಂಶೋಧಕರಾದ ಡಾ ನಿರ್ ಡೈ ಅವರು ಟೆಲ್-ಅವೀವ್ ಬಳಿಯ ಬೆಟ್-ಡಗನ್‌ನಲ್ಲಿರುವ ಎಆರ್‌ಒ ವೊಲ್ಕನಿ ಕೇಂದ್ರದಲ್ಲಿ ಬೆಳೆಸಿದ್ದರು. ಇಲಾನ್ ಜಾತಿಯ ಸ್ಟ್ರಾಬೆರಿಯೂ ದೊಡ್ಡ ಗಾತ್ರಕ್ಕೆ ಖ್ಯಾತಿ ಗಳಿಸಿದೆ.

https://www.instagram.com/reel/CaAvNbejDEz/?utm_source=ig_embed&ig_rid=459b554f-3bf5-4f86-98da-6032ee0eb33e

ಜನವರಿ ಅಂತ್ಯದಲ್ಲಿ ಮತ್ತು ಫೆಬ್ರವರಿ ಆರಂಭದಲ್ಲಿ ಬರುವ ಈ ಸ್ಟ್ರಾಬೆರಿ ಋತುವಿನಲ್ಲಿ, ಇದು ವಿಶೇಷವಾಗಿ ತಂಪಾಗಿರುತ್ತದೆ. ಈ ಸ್ಟ್ರಾಬೆರಿ ಹೂ ಬಿಡುವುದರಿಂದ ಆರಂಭವಾಗಿ 45 ದಿನಗಳಿಗಿಂತಲೂ ಹೆಚ್ಚು ಕಾಲ ನಿಧಾನವಾಗಿ ಬೆಳವಣಿಗೆ ಹೊಂದಿದ್ದು ಇದು ಪೂರ್ಣ ಮಾಗಿದಾಗ ಈ ಭಾರಿ ಗಾತ್ರಕ್ಕೆ ಕಾರಣವಾಯಿತು ಎಂದು ಡಾ ನಿರ್ ದಾಯ್ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಗೆ ತಿಳಿಸಿದರು.

ಅನೇಕ ಬೆರಿಗಳು ಬೆಳೆದು ಒಟ್ಟಿಗೆ ಬೆಸೆದು ಒಂದು ದೊಡ್ಡ ಸ್ಟ್ರಾಬೆರಿಯನ್ನು ರೂಪಿಸುತ್ತವೆ. ವಿಶ್ವದ ಅತ್ಯಂತ ತೂಕದ ಸ್ಟ್ರಾಬೆರಿ ಹಿಂದಿನ ದಾಖಲೆ 250 ಗ್ರಾಂ ಆಗಿತ್ತು. ಈ ಸ್ಟ್ರಾಬೆರಿಯನ್ನು ಕೊಜಿ ನಕಾವೊ ಅವರು ಫುಕುವೋಕಾದಲ್ಲಿ ಬೆಳೆಸಿದ್ದರು ಮತ್ತು 2015 ರ ಜನವರಿ 28ರಂದು , ಜಪಾನ್‌ನ ಫುಕುವೋಕಾದಲ್ಲಿ ಇದನ್ನು ತೂಕ ಮಾಡಲಾಗಿತ್ತು. ಇದು ಅಮೌ ಎಂಬ ಜಪಾನಿನ ಜಾತಿಗೆ ಸೇರಿದ ಸ್ಟ್ರಾಬೆರಿಯಾಗಿದೆ.

Leave a Reply

Your email address will not be published.