
ಕಾಶಿ ವಿಶ್ವನಾಥ ದೇಗುಲಕ್ಕೆ ಬರೋಬ್ಬರಿ 60 ಕೆಜಿ ಚಿನ್ನ ದಾನ ಮಾಡಿದ ಅನಾಮಧೇಯ ಭಕ್ತ..!
ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 60 ಕೆಜಿ ಚಿನ್ನ ದಾನ ಮಾಡಿದ್ದಾರೆ. ಗರ್ಭಗುಡಿ ಅಲಂಕಾ ರಕ್ಕೆ ಈಗಾಗಲೇ 37 ಕೆಜಿ ಚಿನ್ನವನ್ನು ಬಳಕೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ಮಾತನಾಡಿ, ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ ದಾನವಾಗಿ ಬಂದಿದೆ. ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಹೊದಿಕೆಗೆ ಬಳಸಲಾಗಿದೆ. ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವ ನಾಥ ದೇವಸ್ಥಾನದ ಮುಖ್ಯ ವಿನ್ಯಾಸದ ಚಿನ್ನದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸಲಾಗುವುದು ಎಂದಿದ್ದಾರೆ.
2021ರ ಡಿಸೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮವನ್ನು ಔಪಚಾರಿಕವಾಗಿ ಉದ್ಘಾಟನೆ ಮಾ ಡಿದ್ದರು. ಅದಕ್ಕೂ ಮೊದಲೇ ದಾನಿಯು ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಾವು 60 ಕೆಜಿ ಚಿನ್ನವನ್ನು ದೇವಸ್ಥಾ ನಕ್ಕೆ ದಾನವಾಗಿ ನೀಡುವುದಾಗಿ ಹೇಳಿದ್ದರು. ದೇವಾಲಯದ ಅಧಿಕಾರಿಗಳು ಅವರು ದೇಣಿಗೆ ನೀಡಿದ ಚಿನ್ನವನ್ನು ಗರ್ಭಗುಡಿಯ ಒಳ ಗೋಡೆಯ ಚಿನ್ನದ ಲೇಪನಕ್ಕಾಗಿ ಮತ್ತು ಮುಖ್ಯ ದೇ