ISROದಿಂದ ಮತ್ತೊಂದು ಸಾಧನೆ: ವಿದ್ಯಾರ್ಥಿಗಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಉಡಾವಣೆ

ರಾಷ್ಟ್ರೀಯ

ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ (ಇಸ್ರೋ) ಭೂಮಿಯ ವೀಕ್ಷಣಾ ಉಪಗ್ರಹ EOS-02 ಅನ್ನು SSLV-D1  ಉಡಾವಣಾ ವಾಹಕ ಮೂಲಕ ಉಡಾಯಿಸಿದೆ. ಇಒಎಸ್-1 ಎರಡು ಉಪಗ್ರಹಗಳನ್ನು ಹೊತ್ತು ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‍ನಿಂದ ಇಂದು ಬೆಳಗ್ಗೆ 9:18ರ ಸುಮಾರಿಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.

ಇದರ ಜೊತೆ ಭಾರತ 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೆಜಿ ತೂಕದ `ಆಜಾದಿ ಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ದಿದೆ. ಕಳೆದ 7 ದಿನಗಳಿಂದ ಇಸ್ರೋ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸುತ್ತಿತ್ತು. ಇಂದು ಬೆಳಗ್ಗೆ 9:18ರ ಸುಮಾರಿಗೆ ಉಡಾವಣೆ ಗೊಂಡಿದೆ. ಈ ಉಪಗ್ರಹಗಳಿಂದ ರಾಕೆಟ್ ನಿರ್ಮಿಸಲು ಸಹಾಯ ಮಾಡುವ ಹೊಸ ವೈಶಿಷ್ಟ್ಯಗಳಿಂದ ನಿರ್ಮಿಸಲಾಗಿದ್ದು,

ಮಾಡ್ಯುಲರ್ ಸಿಸ್ಟಮ್, ಪೈರೋ ಸರ್ಕ್ಯೂಟ್, ಮಲ್ಟಿ ಸ್ಯಾಟಲೈಟ್ ಅಡಾಪ್ಟರ್ ಡೆಕ್, ಕಮರ್ಷಿಯಲ್ ಆಫ್ ದಿ ಶೆಲ್ಫ್ ಘಟಕಗಳೊಂದಿಗೆ ಮಿನಿಯೇಚರ್ ಕಡಿಮೆ ವೆಚ್ಚದ ಏವಿಯಾನಿಕ್ಸ್, ಇಂಟರ್‍ಫೇಸ್‍ನೊಂದಿಗೆ ವೇಗವಾಗಿ ಚೆಕ್ ಔಟ್ ವ್ಯವಸ್ಥೆಯನ್ನು ಹೊಂದಿರುವ ಬೋರ್ಡ್ ಕಂಪ್ಯೂಟರ್‌ಗಳು ಇರಲಿದೆ. ಉಡಾವಣೆಗೊಂಡ ಸುಮಾರು 13.2 ನಿಮಿಷಗಳ ಬಳಿಕ ಉಪಗ್ರಹಗಳನ್ನು ಈ ರಾಕೆಟ್ ಕಕ್ಷೆಗೆ ತಲುಪಿಸಿದೆ.

Leave a Reply

Your email address will not be published.