
ಬೆಂಗಳೂರು DC ಆಗಿದ್ದ ಮಂಜುನಾಥ್ Arrest
ಬೆಂಗಳೂರು : ACB ಪೊಲೀಸರು ರಣಬೇಟೆಯಾಡಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ರನ್ನು ಅರೆಸ್ಟ್ ಮಾಡಿದ್ದಾರೆ. DC ಕಚೇರಿಯಲ್ಲಿ 5 ಲಕ್ಷ ರೂ. ಲಂಚ ಪಡೆದ ಪ್ರಕರಣದಲ್ಲಿ ಹೈಕೋರ್ಟ್ ACB ಗೆ ಛೀಮಾರಿ ಹಾಕಿದ ಬೆನ್ನಲ್ಲೇ ಮಂಜು ನಾಥ್ ರನ್ನು ಅರೆಸ್ಟ್ ಮಾಡಲಾಗಿದೆ. ಮಂಜುನಾಥ್ ಲಂಚ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದರು. ಎಸಿಬಿ ಅಧಿಕಾರಿಗಳು ಕಳೆದ ಮೇ 22ರಂದು ಲಂಚ ಪಡೆಯುವಾಗ ರೇಡ್ ಮಾಡಿದ್ದರು. ಆ ವೇಳೆ ಡೆಪ್ಯೂಟಿ ತಹಶೀಲ್ದಾರ್ ಸೇರಿ ಇಬ್ಬರು ಅರೆಸ್ಟ್ ಆಗಿದ್ರು. ಎರಡನೇ FIRನಲ್ಲಿ DC ಮಂಜುನಾಥ್ ರನ್ನು ಆರೋಪಿ ಮಾಡಲಾಗಿತ್ತು.