ರಾಜ್ ಕುಟುಂಬದಲ್ಲಿ ಮತ್ತೊಂದು ಅಘಾತ: ಅಶ್ವಿನಿ ಪುನೀತ್ ರಾಜ್ ಕುಮಾರ್ ತಂದೆ ನಿಧನ

ಚಲನಚಿತ್ರ

ರಾಜ್‌ಕುಮಾರ್ ಕುಟುಂಬದ ಕಿರಿ ಸೊಸೆ, ಪುನೀತ್ ರಾಜ್‌ಕುಮಾರ್ ಪತ್ನಿ, ಪಿಆರ್‌ಕೆ ಸಂಸ್ಥೆಯ ಒಡತಿ ಅಶ್ವಿನಿ ಪುನೀತ್‌ ರಾಜ್‌ ಕುಮಾ ರ್‌ಗೆ ಮತ್ತೊಂದು ಅಘಾತ ಎದುರಾಗಿದೆ. ಆರೋಗ್ಯವಾಗಿಯೇ ಸ್ನೇಹಿತರ ಜೊತೆ ವಾಕಿಂಗ್ ಮಾಡುತ್ತಿದ್ದ ತಂದೆ ರೇವನಾಥ್ ಕೊನೆ ಉ ಸಿರೆಳೆದಿದ್ದಾರೆ. ಅಪ್ಪು ನಿಧನದ ನೋವು ಮರೆಯಾಗೋ ಮುನ್ನವೇ ಅಶ್ವಿನಿ ಅವರಿಗೆ ಮತ್ತೊಂದು ಶಾಕ್ ಇದು. ಅಶ್ವಿನಿ ಅವರ ತಂದೆ ರೇವನಾಥ್‌ ಮನೆಯವರು ಮತ್ತು ಸ್ನೇಹಿತರ ಜೊತೆ ವಾಕಿಂಗ್ ಮಾಡುತ್ತಾ ಓಡಾಡಿಕೊಂಡಿದ್ರು.

ಆದರೆ ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ರೇವನಾಥ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.  ರೇವನಾಥ್‌ ಅವರು ಬೆಂಗಳೂರಿನ ಮಹಾನಗರ ಪಾಲಿಕೆಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದಾರೆ. ಹಿರಿ ಯ ರಾಜಕಾರಣಿ ಡಿಬಿ ಚಂದ್ರೇಗೌಡ ಅವರ ಹತ್ತಿರದ ಸಂಬಂಧಿ. ರೇವನಾಥ್ ಅವರು

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭಾಗಮನೆಯವರು. ಅಳಿಯ ಪುನೀತ್ ರಾಜ್‌ಕುಮಾರ್ ಅಗಲಿದ ಸಮ ಯದಲ್ಲಿ ಮಗಳಿಗೆ ಬೆನ್ನೆಲುಬಾಗಿ ನಿಂತುಕೊಂಡಿದ್ದರು ರೇವನಾಥ್. ರೇವನಾಥ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ ಹಾಗೇ ಅಶ್ವಿನಿ ಅವರಿಗೆ ಹಾಗೂ ಕುಟುಂಬದ ಇತರೆ ಸದಸ್ಯರ ನೋವು ತಡೆದುಕೊಳ್ಳಲು ಆ ದೇವರು ಶಕ್ತಿ ನೀಡಲಿ.

Leave a Reply

Your email address will not be published.