ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲವೇ..? ಆಗಾಗ ಎಚ್ಚರ ಆಗುತ್ತಿದೆಯೇ..? ಇಲ್ಲಿದೆ ನೋಡಿ ಪರಿಹಾರ

ಲೈಫ್ ಸ್ಟೈಲ್

ಕೆಲವು ಅನಾರೋಗ್ಯದ ಕಾರಣದಿಂದ ರಾತ್ರಿ ನಿದ್ದೆಯಿಲ್ಲದೆ ತಡವರಿಸುವುದು ಸಹಜ. ಅದೇ ಆರೋಗ್ಯವಾಗಿದ್ದರೂ ರಾತ್ರಿ ಸರಿಯಾಗಿ ನಿದ್ರೆ ಬರದೆ ಇರುವುದು, ಕೆಟ್ಟ ಕನಸು ಬೀಳುವುದು, ಯಾವುದೋ ವಿಚಾರದ ಕುರಿತು ನಿದ್ರೆ ಗೆಡುವುದು, ಎಲ್ಲವೂ ಆಧ್ಯಾತ್ಮಿಕ ತೊಂದರೆ ಎಂದು ಪರಿಗಣಿಸಲಾಗುತ್ತದೆ. ವಾಸ್ತು ದೋಷಗಳಿದ್ದರೂ ಈ ರೀತಿಯ ಸಮಸ್ಯೆಗಳು ಉಲ್ಬಣವಾಗುವುದು. ಅದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಪರಿಹಾರಗಳಿವೆ.

ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ನಿದ್ರೆಗೆ ಉಂಟಾಗುವ ಅಡಚಣೆಯನ್ನು ತಪ್ಪಿಸಲು ಕೆಲವು ಸುಲಭ ಕ್ರಮಗಳನ್ನು ಕೈಗೊಳ್ಳ ಬಹುದು. ಅದು ಯಾವುದು ಎನ್ನುವ ಹುಡುಕಾಟ ನೀವು ಶುರುಮಾಡಿದ್ದರೆ ಆ ಪ್ರಯತ್ನವನ್ನು ಬಿಟ್ಟು ಈ ಲೇಖನವನ್ನು ಓದಿ… ನಿಮಗೆ ಉತ್ತಮ ಪರಿಹಾರ ದೊರೆಯುತ್ತದೆ. ಜೊತೆಗೆ ಸುಂದರ ನಿದ್ರೆ, ಆರೋಗ್ಯವಂತ ಶರೀರ ನಿಮ್ಮದಾಗುವುದು..

ಮಲಗುವ ದಿಕ್ಕು

ಎಲ್ಲೇ ಮಲಗಿದರೂ ನಮ್ಮ ತಲೆಯು ಉತ್ತರಕ್ಕೆ, ಕಾಲು ದಕ್ಷಿಣ ದಿಕ್ಕಿಗೆ ಬರುವಂತೆ ಮಲಗಬೇಕು. ಆಗ ನಿದ್ರೆಯೂ ಸುಂದರವಾಗಿ ಬರುವುದು.

ಜೇನು ತುಪ್ಪ

ಜೇನು ತುಪ್ಪ ಚೆನ್ನಾಗಿ ನಿದ್ದೆ ಮಾಡಲು ರಾತ್ರಿಯ ಹೊತ್ತು ಮಲಗುವ ಮುನ್ನ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಸೇವಿಸಿ. ಜೇನು ತುಪ್ಪವು ನಿಮ್ಮ ದೇಹಕ್ಕೆ ಅಗತ್ಯವಾದ ಗ್ಲೂಕೋಸನ್ನು ನೀಡುವುದರ ಜೊತೆಗೆ ಇದು ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

10 ಗಂಟೆಗಳ ನಿದ್ದೆ ಪಡೆಯಿರಿ

ನೀವು ರಾತ್ರಿಯಲ್ಲಿ ದೀರ್ಘಕಾಲ ನಿದ್ರೆ ಮಾಡಲು ಬಯಸಿದರೆ. 8 ರ ಬದಲಿಗೆ 10 ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ನಿಮ್ಮ ನಿದ್ದೆ ಪೂರ್ಣವಾಗುತ್ತದೆ ಮತ್ತು ನೀವು ಕೂಡ ಹೆಚ್ಚು ಉತ್ಸಾಹದಿಂದ ಇರುತ್ತೀರಿ.

ಕಾಫಿ ಕುಡಿಯಬೇಡಿ

ನಿಮಗೆ ಸಂಜೆ ಅಥವಾ ರಾತ್ರಿ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಇಂದಿನಿಂದಲೇ ಅದನ್ನು ಬಿಡಿ. ಕಾಫಿಯಲ್ಲಿರುವ ಕೆಫೀನ್ ನಿದ್ರೆಯ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುತ್ತದೆ. ಜನರು ಸಾಮಾನ್ಯವಾಗಿ ಇದರಿಂದ ನಿದ್ರಿಸಲು ತೊಂದರೆ ಅನುಭವಿಸುತ್ತಾರೆ.

ಹಗಲು ಹೆಚ್ಚು ಸಮಯ ನಿದ್ರಿಸಬೇಡಿ

ನೀವು ಹಗಲಿನಲ್ಲಿ ಹೆಚ್ಚಾಗಿ ಮಲಗಿದರೆ, ಈ ಚಿಕ್ಕನಿದ್ರೆಯ ಅವಧಿಯನ್ನು ಹೆಚ್ಚು ಮಾಡದಿರಲು ಪ್ರಯತ್ನಿಸಿ. ಹಗಲಿನಲ್ಲಿ ಹೆಚ್ಚು ಹೊತ್ತು ಮಲಗುವುದರಿಂದ ರಾತ್ರಿ ನಿದ್ದೆ ಬಾರದೇ ಸಮಸ್ಯೆ ಉಂಟಾಗುತ್ತದೆ.

ವ್ಯಾಯಾಮ

ಸಂಜೆ ಲಘು ವ್ಯಾಯಾಮ ಮಾಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ದೇಹಕ್ಕೆ ದಣಿವುಂಟಾಗುತ್ತದೆ ಮತ್ತು ಒಳ್ಳೆಯ ನಿದ್ದೆ ಬರುತ್ತದೆ. ವ್ಯಾಯಾಮದ ಇನ್ನೊಂದು ಪ್ರಯೋಜನವೆಂದರೆ ನೀವು ಸಹ ಫಿಟ್ ಆಗಿ ಉಳಿಯಬಹುದು.

ರಾತ್ರಿಯಲ್ಲಿ ಹೆಚ್ಚು ಆಹಾರ ಸೇವಿಸಬೇಡಿ

ನೀವು ತಡವಾಗಿ ಮತ್ತು ರಾತ್ರಿಯಲ್ಲಿ ಭಾರೀ ಆಹಾರವನ್ನು ಸೇವಿಸಿದರೆ, ಈಗಿನಿಂದ ಈ ಅಭ್ಯಾಸವನ್ನು ಬದಲಿಸಿ. ಹೊಟ್ಟೆ ಭಾರವಾದ ಕಾರಣ ಗ್ಯಾಸ್ ಆಗಬಹುದು ಅಥವಾ ಅಸಿಡಿಟಿ ಸಮಸ್ಯೆ ಎದುರಾಗಬಹುದು. ಈ ಕಾರಣದಿಂದಾಗಿ ನಿದ್ರೆ ಬರುವುದಿಲ್ಲ.

ಬೆಳ್ಳುಳ್ಳಿ ಎಸಳು

ಸಾಮಾನ್ಯವಾಗಿ ಬೆಳ್ಳುಳ್ಳಿಯ ಖಾರವಾದ ಮತ್ತು ಘಾಟು ವಾಸನೆಯನ್ನು ಯಾರೂ ಸಹಿಸುವುದಿಲ್ಲ. ಆದರೆ ಈ ಘಾಟು ಆರೋಗ್ಯಕ್ಕೆ ಉತ್ತಮವಾಗಿದ್ದು ಇದನ್ನು ಕೊಂಚ ಸಹಿಸಬೇಕಾಗಿರುವುದು ಅಗತ್ಯವಾಗಿದೆ. ಈ ಘಾಟು ವಾಸನೆ ನಮಗೆ ಹೇಗೆ ಸಹ್ಯವಲ್ಲವೋ ಹಾಗೇ ಋಣಾತ್ಮಕ ಶಕ್ತಿಗಳಿಯೂ ಸಹ್ಯವಲ್ಲ. ಒಂದೆರಡು ಎಸಳು ಬೆಳ್ಳುಳ್ಳಿಯನ್ನು ತಲೆದಿಂಬಿನಡಿ ಅಥವಾ ಜೇಬಿನಲ್ಲಿರಿಸಿದರೆ ಈ ಶಕ್ತಿಗಳು ಹತ್ತಿರ ಬರದೇ ಸುಖನಿದ್ದೆಗೆ ಯಾವುದೇ ತಡೆ ಇಲ್ಲವಾಗುತ್ತದೆ.

Leave a Reply

Your email address will not be published.