Home Crime ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದ್ದ ಪತ್ನಿ!

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದ್ದ ಪತ್ನಿ!

515
0
SHARE

ವಿಜಯನಗರ: ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಮುಗಿಸಿದ್ದವಳು ಪೊಲೀಸರ ಅತಿಥಿಯಾಗಿದ್ದಾಳೆ. ಹೊಸಪೇಟೆ ನಗರದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ. ಇದಕ್ಕೆ ಸಂಬಂಧಿಸಿದಂತೆ ಮೂರು ಜನರನ್ನು ಟಿ.ಬಿ.ಡ್ಯಾಂ.ಪೊಲೀಸರು ಬಂಧಿಸಿದ್ದರು. ಇವರು ಮಾತ್ರವಲ್ಲದೇ ಕೊಲೆಗೀಡಾದ ವ್ಯಕ್ತಿಯ ಪತ್ನಿಯೂ ಸೇರಿದಂತೆ ಇತರೆ ಇಬ್ಬರನ್ನೂ ಕೂಡಾ ಬಂಧಿಸಿದ ಪೊಲೀಸರು.ಟಿ.ಬಿ. ಡ್ಯಾಂ ಪಿ.ಎಲ್‌.ಸಿ ನಿವಾಸಿ ಸರ್ಗುಣಮ್‌ ಮೈಕೆಲ್‌ ಜಾನ್‌, ಹಾಗೂ ತಮಿಳುನಾಡಿನ ವಿನೋದ್‌, ಅಶೋಕ್‌ ಬಂಧಿತ ಆರೋಪಿಗಳು.

ವಿಚಾರಣೆಯ ಬಳಿಗ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ ಪೊಲೀಸರು. ಕಳೆದ ಮಾರ್ಚ್ ತಿಂಗಳ 20ರಂದು ರಾತ್ರಿ ನಗರದ ಟಿ.ಬಿ.ಡ್ಯಾಂ ಸೇತುವೆ ಬಳಿ ಕಲ್ಲಿನಿಂದ ಹೊಡೆದು ಮೈಕಲ್‌ ಜಾನ್‌ (40) ಕೊಲೆಮಾಡಲಾಗಿತ್ತು. ಮಾರನೆ ದಿನ ಬೆಳಗ್ಗೆ ಟಿ.ಬಿ. ಡ್ಯಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್‌ ಇನ್‌ಸ್ಪೆಕ್ಟರ್‌ ವಿ. ನಾರಾಯಣ ನೇತೃತ್ವದ ತಂಡದಿಂದ ನಡೆದ ಕಾರ್ಯಾಚರಣೆ. ಮೈಕೆಲ್‌ ಜಾನ್‌ ಪತ್ನಿ ಸರ್ಗುಣಮ್‌ ತಮಿಳುನಾಡಿನಿಂದ ವಿನೋದ್‌, ಅಶೋಕ್‌ ಅವರನ್ನು ಕರೆಸಿ ಹತ್ಯೆಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ. ಪೊಲೀಸರ ಕಾರ್ಯಾಚರಣೆಯಿಂದ ಕೊಲೆಯ ಸತ್ಯ ಹೊರಬಂದಿದೆ.

LEAVE A REPLY

Please enter your comment!
Please enter your name here