‘’ಅರುಂಧತಿ’’ ಸಿನಿಮಾ ನೋಡಿ ಆತ್ಮಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿ..!

ಅಪರಾಧ ಜಿಲ್ಲೆ

ತುಮಕೂರು: ಅರುಂಧತಿ ಸಿನಿಮಾ ನೋಡಿ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮಧುಗಿರಿ ತಾಲ್ಲೂಕಿನ ಕೊಂಡವಾಡಿ ಗ್ರಾಮದ ರಸ್ತೆ ಬದಿಯಲ್ಲಿ ನಡೆದಿದೆ. ಮೃತ ಯುವಕನನ್ನು ರೇಣುಕಾ ಪ್ರಸಾದ್ (22) ಎಂದು ಗುರುತಿಸಲಾಗಿದೆ.

ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ನೋವು ತಾಳಲಾರದೇ ರಸ್ತೆಯಲ್ಲಿ ಕಿರುಚಾಡುತ್ತಾ, ಒದ್ದಾಡುತ್ತಿದ್ದ ಯುವಕನನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಆದರೆ ಗಂಭೀರ ಸ್ಥಿತಿಯಲ್ಲಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಗೆ ಅಡಿಕ್ಟ್ ಆಗಿದ್ದ ರೇಣುಕಾ ಪ್ರಸಾದ್, ಅರುಂಧತಿ ಸಿನಿಮಾ ನಾಯಕಿಯಂತೆ ದುಷ್ಟ ಸಂಸಾರಕ್ಕಾಗಿ ಪುನರ್ಜನ್ಮ ತಾಳಲು ಬೆಂಕಿ ಹಚ್ಚಿಕೊಂಡು ಮುಕ್ತಿ ಕೊಡಿ, ಮುಕ್ತಿ ಕೊಡಿ ಎನ್ನುತ್ತಿದ್ದ. ಈ ವಿಚಾರದ ಬಗ್ಗೆ ಹೆಚ್ಚು ಚಿಂತಿಸಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಆತನ ಪರಿಚಯಸ್ಥರು ಶಂಕಿಸಿದ್ದಾರೆ.

Leave a Reply

Your email address will not be published.