
ಪ್ರೀತಿಸುವಂತೆ ವಿವಾಹಿತೆಗೆ ಬ್ಲಾಕ್ ಮೇಲ್ : ಮನನೊಂದ ಗೃಹಿಣಿ ನೇಣಿಗೆ ಶರಣು
ಪ್ರೀತಿಸುವಂತೆ ವಿವಾಹಿತೆಗೆ ಬ್ಲಾಕ್ ಮೇಲ್ ಮಾಡಿದ ಅಂತ ಮನನೊಂದ ಗೃಹಿಣಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಟಿಪ್ಪುನಗರದಲ್ಲಿ ನಡೆದಿದೆ ..ಮೃತ ಮಹಿಳೆಯನ್ನು 17 ವರ್ಷದ
ಆಲ್ಫೀಯಾ ಖಾನಂ ಎಂದು ತಿಳಿದು ಬಂದಿದ್ದು .ಅದೇ ಏರಿಯಾದ ಸೈಯದ್ ನಾಸೀಸ್ ಎನ್ನುವಾತ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ .ಇನ್ನು ಆಲ್ಫೀಯಾ ಮತ್ತು ನಾಸೀಸ್ ಇಬ್ಬರು ಟಿಪ್ಪು ನಗರದ ನಿವಾಸಿಗಳಾಗಿದ್ದು , ಘಟನೆಯಿಂದ
ಆಕ್ರೋಶಗೊಂಡ ಸಂಭಂದಿಕರು ನಸೀಸ್ ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.. ಧರ್ಮದೇಟು ತಿಂದ ಬಳಿಕ ಆರೋಪಿ ನಾಸೀರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.. ಘಟನೆ ಸಂಬಂಧ ಮೃತಳ ಪೋಷಕರು ಆರೋಪಿ ವಿರುದ್ಧ ಚಿಂತಾಮಣಿ ನಗರ ಠಾಣೆಗೆ ದೂರು ನೀಡಿದ್ದಾರೆ .