
ವಿಧಾನಸೌಧ ಇರೋದು ಕುಸ್ತಿ ಆಡೋದಿಕ್ಕೆ ಅಲ್ಲ: ಬೆಂಗಳೂರಿನಲ್ಲಿ ಸಚಿವ ಅಶೋಕ್
ಬೆಂಗಳೂರು: ವಿಧಾನಸಭೆಯಲ್ಲಿ ಧರಣಿ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಂದಾಯ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸದನದಲ್ಲಿ ಧರಣಿ ಮಾಡುತ್ತಿರುವ ಕಾಂಗ್ರೆಸ್ ಅವರಿಗೆ ಎರಡು ಬಾರಿ ಸಂದಾನ ಮಾಡಿದರೂ ಕೇಳಿಲ್ಲ. ರಾಜ್ಯದ ಜನತೆ ಟ್ಯಾಕ್ಸ್ ಮೇಲೆ ನಾವು ಸಂಬಳ ಪಡೆಯುತ್ತಿದ್ದೇವೆ. ಅವರ ಕಷ್ಟದ ಬಗ್ಗೆ ಧ್ವನಿ ಎತ್ತಬೇಕು. ಪಕ್ಷದ ವಿಚಾರ ಮಾತನಾಡಲು ವಿಧಾನಸೌಧ ಕಟ್ಟಿಲ್ಲ, ಸದನ ಇರೋದು ಕುಸ್ತಿ ಆಡೋದಿಕ್ಕೆ ಅಲ್ಲ. ಬಡವರ ಏಳಿಗೆಗೆ ಎಂದು ಹೇಳಿದರು. ಕಾಂಗ್ರೆಸ್ ಅವರು ಗೂಂಡಾಗಿರಿ ಬಿಡಬೇಕು. ಮೂವತ್ತು, ನಲವತ್ತು ಜನರಿಗಾಗಿ ಪ್ರತಿಭಟನೆ ಮಾಡ್ತೀದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮ ಇದ್ದು, ಅದು ಬೇಕೋ, ಬೇಡವೋ ಎಂದು ಚರ್ಚೆ ಮಾಡಬೇಕು. ಸೋಮವಾರನಾದರೂ ಸದನದಲ್ಲಿ ಚರ್ಚೆ ಮಾಡಲು ಬಿಡಿ. ನಾವು ಪಡೆಯುತ್ತಿರುವ ಟಿಎ, ಡಿಎ ಹಣ ಬಡವರ ಹಣ ನೆನಪಿರಲಿ ಎಂದು ಸಚಿವ ಅಶೋಕ್ ಹೇಳಿದ್ದಾರೆ.