ವಿಧಾನಸಭೆ ಚುನಾವಣೆ: ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ

ರಾಷ್ಟ್ರೀಯ

ಉತ್ತರ ಪ್ರದೇಶ : ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಇಂದು ಪಿಲಿಭಿತ್​, ಲಖಿಂಪುರ ಖೇರಿ, ಸೀತಾಪುರ, ಹಾರ್ಡೋಯಿ, ಉನ್ನಾವೋ, ಲಖನೌ, ರಾಯ್​ ಬರೇಲಿ, ಬಾಂದಾ ಮತ್ತು ಫತೇಹ್​ಪುರ ಜಿಲ್ಲೆಗಳ ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 2017ರ ಚುನಾವಣೆಯಲ್ಲಿ ಈ 59 ವಿಧಾನಸಭಾ ಕ್ಷೇತ್ರಗಳಲ್ಲಿ 51ನ್ನು ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿ ಪಾಲಿಗೆ ಲಖಿಂಪುರ ಖೇರಿ ಸ್ವಲ್ಪ ಸವಾಲಿನ ಕ್ಷೇತ್ರವಾಗಲಿದೆ. ಅಲ್ಲಿ ರೈತರ ಮೇಲೆ ಕಾರು ಹರಿಸಿದ್ದಲ್ಲದೆ, ಹಿಂಸಾಚಾರ ಸೃಷ್ಟಿಸಿದ ಆರೋಪ ಹೊತ್ತಿರುವುದು ಬಿಜೆಪಿ ಕೇಂದ್ರ ಸಚಿವರ ಪುತ್ರನೇ ಆಗಿದ್ದರಿಂದ ಮತ್ತು ಇತ್ತೀಚೆಗೆ ಆಶೀಶ್​ ಮಿಶ್ರಾರಿಗೆ ಜಾಮೀನು ಸಿಕ್ಕಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.  ಈಗಾಗಲೇ ಮತದಾನ ಶುರುವಾಗಿದ್ದು, ಮತಗಟ್ಟೆಗಳಿಗೆ ಜನರು ಆಗಮಿಸುತ್ತಿದ್ದಾರೆ.

Leave a Reply

Your email address will not be published.