Home District ATM- BAR ಗಳಿಗೂ ತಟ್ಟಿದ ಎಲೆಕ್ಷನ್ ಎಫೆಕ್ಟ್..!ಬೆಂಗಳೂರಿನಲ್ಲಿ “ನೋ ಕ್ಯಾಶ್, ನೋ ಬಿಯರ್”..!

ATM- BAR ಗಳಿಗೂ ತಟ್ಟಿದ ಎಲೆಕ್ಷನ್ ಎಫೆಕ್ಟ್..!ಬೆಂಗಳೂರಿನಲ್ಲಿ “ನೋ ಕ್ಯಾಶ್, ನೋ ಬಿಯರ್”..!

603
0
SHARE

ರಾಜ್ಯದಲ್ಲಿ ಚುನಾವಣೆ ಕಾವು ಸಿಕ್ಕಪಟ್ಟೆ ರಂಗೇರುತ್ತಿದೆ.. ಸಿಟಿಲಿ ಬಿಸಿಲು ಜಾಸ್ತಿ ಆರ್ಡ್ ಡ್ರಿಂಕ್ಸ್ ಬದಲು ಒಂದೆರೆಡು ಬಿಯರ್ ಕುಡಿಯೋನ ಅನ್ಕೊಂಡರೋ, ನಿಮ್ಮ ಜೇಬ್ ಅಲ್ಲಿ ಕ್ಯಾಶ್ ಇದೆಯಾ ಅನ್ನೋದನ್ನ ಕನ್ಫರ್ಮ ಮಾಡ್ಕೊಳ್ಳಿ.. ಒಂದು ವೇಳೆ ಕ್ಯಾಶ್ ಇಲ್ಲ ಎಟಿಎಂಗೆ ಹೋಗಿ ಡ್ರಾ ಮಾಡೋಣ ಅಂತಾ ಹೋದ್ರೆ…

 

ಬೆಂಗಳೂರಿನಲ್ಲಿ ಈ ಬಾರಿ ಚುನಾವಣೆ ಏಫೆಕ್ಟ್ ಗೆ ಎಟಿಎಂ ಗ್ರಾಹಕರು ತತ್ತರಿಸಿ ಹೋಗುತ್ತಿದ್ದಾರೆ.. ಅರ್ಜೆಂಟ್ ಆಗಿ ಹಣಬೇಕು ಅಂತಾ ಎಟಿಎಂಗೆ ಹೋಗೋ ಗ್ರಾಹಕರು ಸಪ್ಪೆ ಮುಖ ಹಾಕ್ತಾ ಹೊರ ಬರುತ್ತಿದ್ದಾರೆ. ಏಕೆಂದ್ರೆ, ನಗರದಲ್ಲಿ ಎಚ್ಡಿಎಫ್ ಸಿ, ಕೆನರಾ, ಕೋಟೆಕ್, ಆಕ್ಸಿಸ್ ಐಸಿಐಸಿಐ ಸೇರಿದಂತೆ ಬಹುತೇಕ ಬ್ಯಾಂಕಿನ ಎಟಿಎಂಗಳಲ್ಲಿ ದುಡ್ಡು ಸಿಗುತ್ತಿಲ್ಲ. ಬ್ಯಾಂಕಿಗೋ ಅಥವಾ ಎಲೆಕ್ಷನ್‌ಗೋ ಬೈದುಕೊಂಡೇ ಎಟಿಎಂ ಹುಡ್ಕೊಂಡು ಹೋಗ್ತಿದ್ದಾರೆ. ರಾಜಕಾರಣಿಗಳೇ ಹಣ ಸಂಹಗ್ರಹಣೆ ಮಾಡುತ್ತಿರಬಹುದು ಎಂದು ಗ್ರಾಹಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ…
.

ಇನ್ನು, ನೋ ಕ್ಯಾಶ್ ಒಂದು ಸಮಸ್ಯೆಯಾದ್ರೆ.. ಮದ್ಯ ಪ್ರಿಯರಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ಅದರಲ್ಲೂ ಬೇಸಿಗೆಯಲ್ಲಿ ಬಿಯರ್ ಪ್ರಿಯರಿಗೂ ಎಲೆಕ್ಷನ್ ಏಫೆಕ್ಟ್ ಜೋರಾಗೆ ತಟ್ಟಿದೆ.ಏಕೆಂದ್ರೆ, ಅಬಕಾರಿ ಇಲಾಖೆ ಬಿಯರ್ ಪೂರೈಕೆಯನ್ನು ಗಣನೀಯವಾಗಿ ಕಡಿತಗೊಳಿಸಿದೆ. ಇರೋ ಅಲ್ಪ ಸ್ವಲ್ಪ ಬಿಯರ್ ಕೂಡ ಇನ್ನೆರಡು ದಿನಗಳು ಖಾಲಿ ಆಗುತ್ತೆ. ಆಗ ಬಿಯರ್ ಗಾಗಿ ಹಾಹಾಕಾರ ಉಂಟಾಗಲಿದೆ..ಪ್ರಭಾವಿ ರಾಜಕಾರಣಿಗಳು ಬ್ಯಾಂಕ್ ಹಾಗೂ ಅಬಕಾರಿ ಇಲಾಖೆಯ ಮೇಲೆ ಪ್ರಭಾವ ಬೀರುತ್ತಿರೋ ಅನುಮಾನಗಳು ಮೂಡಿವೆ. ಎಟಿಎಂ ನಂಬಿ ಹೋದರೆ ನೀವು ಬರಿಗೈಯಲ್ಲಿ ಬರುವುದು ಗ್ಯಾರಂಟಿ. ಹೀಗಾಗಿ ಬ್ಯಾಂಕ್‌ಗೆ ಹೋಗಿ ಹಣ ಪಡೆಯುವುದು ಲೇಸು…

 

ಇನ್ನು. ಬಿಯರ್ ಪ್ರಿಯರು ಕೂಡ ಎಲೆಕ್ಷನ್ ಮುಗಿಯವ ವರೆಗೂ ಕಾಯಲೇಬೇಕು…

 

 

 

 

 

LEAVE A REPLY

Please enter your comment!
Please enter your name here