ಆಗಸ್ಟ್ ನಲ್ಲಿ ಸ್ಟಾರ್ಟ್ ಆಗುತ್ತಂತೆ ಬಿಗ್ ಬಾಸ್ ಓಟಿಟಿ: ‘’ಬಿಗ್ ಬಾಸ್’’ ಗೆ ಹೋಗ್ತಾರಾ ಕಾಫಿ ನಾಡು ಚಂದು

ಚಲನಚಿತ್ರ

ಕನ್ನಡದ ಬಿಗ್ ಬಾಸ್ ಈ ಬಾರಿ ಎರಡು ವೇದಿಕೆಯಲ್ಲಿ ಮೂಡಿ ಬರಲಿದೆ. ಮೊದಲು ವೂಟ್ಸ್ ಓಟಿಟಿಯಲ್ಲಿ ಪ್ರಸಾರವಾದರೆ, ಟಿವಿಗಾಗಿಯೇ ಮತ್ತೊಂದು ಶೋ ಚಿತ್ರೀಕರಣ ಮಾಡಲಾಗುವುದು ಎಂದಿದೆ ಕಲರ್ಸ್ ಕನ್ನಡ ವಾಹಿನಿ. ಸೀಸನ್ 8 ಯಶಸ್ವಿಯಾಗಿ ಮುಗಿಸಿರುವ ವಾಹಿನಿಯು ಇದೀಗ ಸೀಸನ್ 9ಕ್ಕೆ ಕಾಲಿಟ್ಟಿದೆ.

ಮೊದಲು ಓಟಿಟಿಯಲ್ಲಿ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆಗಸ್ಟ್ ನಲ್ಲಿ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ಈಗಾಗಲೇ ಬಿಗ್ ಬಾಸ್ ಮನೆ ಸಿಂಗಾರಗೊಳ್ಳುತ್ತಿದ್ದು, ಮೊನ್ನೆಯಷ್ಟೇ ಪ್ರೋಮೋ ಕೂಡ ಶೂಟ್ ಮಾಡಲಾಗಿದೆ. ಪ್ರೊಮೋ ಶೂಟ್ ನಲ್ಲಿ ಸುದೀಪ್ ಭಾಗಿಯಾಗಿದ್ದು, ಕೆಲವೇ ದಿನಗಳಲ್ಲೇ ಈ ಪ್ರೊಮೋ ನೋಡಬಹುದಾಗಿದೆಯಂತೆ

ಈಗಾಗೇ ದೊಡ್ಡಮನೆಗೆ ಯಾರೆಲ್ಲ ಹೋಗಬಹುದು ಎಂಬ ಚರ್ಚೆ ಶುರುವಾಗಿದ್ದು, ಕೆಲವು ಹೆಸರುಗಳು ಹರಿದಾಡುತ್ತಿವೆ. ನಿರ್ದೇಶಕ ನವೀನ್ ಕೃಷ್ಣ, ಪವಿತ್ರಾ ಲೋಕೇಶ್, ಗುರೂಜಿ ಸೇರಿದಂತೆ ಈ ಪಟ್ಟಿಯಲ್ಲಿದ್ದಾರೆ. ಈ ಯಾದಿಯಲ್ಲಿ ಕಾಫಿನಾಡು ಚಂದುಗೆ ಅವಕಾಶ ನೀಡುವಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಾಹಿನಿಗೆ ಮನವಿ ಮಾಡಿಕೊಂಡಿದ್ದಾರೆ. ಆಟೋ ಡ್ರೈವರ್ ಆಗಿರುವ ಕಾಫಿನಾಡು ಚಂದು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಮ್ಮದೇ ಆದ ರೀತಿಯಲ್ಲಿ ಹೇಳುತ್ತಾರೆ. ಇವರು ವಿಡಿಯೋಗಳು ಸಖತ್ ವೈರಲ್ ಆಗುತ್ತವೆ.

Leave a Reply

Your email address will not be published.