
ISSF World Cupನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಶೂಟಿಂಗ್ ತಾರೆ ಸೌರಭ್ ಚೌಧರಿ
ಕೈರೋ: ಭಾರತದ ಶೂಟಿಂಗ್ ತಾರೆ ಸೌರಭ್ ಚೌಧರಿ ಈಜಿಪ್ಟ್ನ ಕೈರೋದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಫೈನಲ್ನಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ 16 ಅಂಕ ಪಡೆದರೆ, ಇವರ ಪ್ರತಿಸ್ಪರ್ಧಿ ಜರ್ಮನಿಯ ಮೈಕಲ್ ಶ್ವಾಲ್ಡ್ ವಿರುದ್ಧ ಮುನ್ನಡೆ ಸಾಧಿಸಿ ಚಾಂಪಿಯನ್ ಆದರು. ಈ ವಿಭಾಗದಲ್ಲಿ ಕಂಚಿನ ಪದಕವನ್ನು ರಷ್ಯಾದ ಅರ್ಟೆಮ್ ಚೆರ್ನೊಸೊಫ್ ಪಡೆದುಕೊಂಡರು. ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ಕಾರಣ ಅವರು ತಮ್ಮ ರಾಷ್ಟ್ರೀಯ ಧ್ವಜವಿಲ್ಲದೆ ಸ್ಪರ್ಧಿಸಿದ್ದರು.
ಒಲಿಂಪಿಯನ್ ಮತ್ತು ಯೂತ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತನಾಗಿರುವ 19 ವರ್ಷದ ಸೌರಭ್ ಅರ್ಹತಾ ಸುತ್ತಿನಲ್ಲಿ 584 ಅಂಕ ಪಡೆದು 3ನೇ ಸ್ಥಾನ ಪಡೆದುಕೊಂಡಿದ್ದರು. ನಂತರ 8 ಶೂಟರ್ಗಳ ಫೈನಲ್ನಲ್ಲಿ 38 ಅಂಕ ಪಡೆದು ಅಗ್ರಸ್ಥಾನಕ್ಕೇರಿದ್ದರು. ಪದಕ ಸುತ್ತಿನಲ್ಲಿ 42.5 ಅಂಕ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಇಶಾ ಸಿಂಗ್, ಶ್ರೀ ನಿವೇತಾ ಮತ್ತು ರುಚಿತಾ ವಿನೆರ್ಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೈರೋ ವಿಶ್ವಕಪ್ನಲ್ಲಿ 60 ರಾಷ್ಟ್ರಗಳ 500ಕ್ಕೂ ಹೆಚ್ಚು ಶೂಟರ್ಗಳು 20 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.