ಆಟೋ ರಿಕ್ಷಾ ಪ್ರಯಾಣಿಕರ ದರ ಪರಿಷ್ಕರಣೆ ಖಂಡಿಸಿ ಆದೇಶ ಪತ್ರ ಸುಟ್ಟು ಹಾಕಿ ಆಕ್ರೋಶ

ಜಿಲ್ಲೆ

ಹುಬ್ಬಳ್ಳಿ: ಆಟೋ ರಿಕ್ಷಾ ಪ್ರಯಾಣಿಕರ ದರವನ್ನು ಪರಿಷ್ಕರಣೆ ಮಾಡಿರುವುದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಅವಳಿನಗರದ ಆಟೋ ಚಾಲಕರು ಪರಿಷ್ಕರಣೆ ಆದೇಶ ಪತ್ರವನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹೌದು, ಧಾರವಾಡ ಜಿಲ್ಲೆಯಲ್ಲಿ ಆಟೋ ಪ್ರಯಾಣಿಕರ ದರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಯಾವೊಂದು ಆಟೋ ಸಂಘಟನೆಗಳನ್ನು ಕರೆದು ಸಭೆ ನಡೆಸದೇ ಮನಸೋ ಇಚ್ಛೆ ಆಟೋ ರಿಕ್ಷಾ ದರವನ್ನು ಪರಿಷ್ಕರಣೆ ಮಾಡಿ ರಾತ್ರೋರಾತ್ರಿ ಆದೇಶವನ್ನು ಹೊರಡಿಸಿದ್ದಾರೆ. ಇದು ಸರಿಯಲ್ಲ. ಈ ಕೂಡಲೇ ಮತ್ತೊಮ್ಮೆ ಜಿಲ್ಲಾಧಿಕಗಳು ಸಭೆ ಕರೆದು ಪರಿಷ್ಕರಣೆ ದರವನ್ನು ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳು 1.6 ಕಿ.ಮೀ ಗೆ ಪ್ರಸ್ತುತವಿರುವ 28 ರೂಪಾಯಿ ದರವನ್ನು 30 ರೂಪಾಯಿಗೆ ಏರಿಸಿದ್ದಾರೆ. ಇದನ್ನು ಅಕ್ಟೋಬರ್ 1 ರಿಂದ ಜಾರಿಗೆ ತರುವಂತೆ ತಿಳಿಸಿದ್ದಾರೆ. ಆದರೆ ಯಾವೊಬ್ಬ ಆಟೋ ಚಾಲಕನನ್ನು ಸಭೆಗೆ ಕರೆಯದೇ ಪರಿಷ್ಕರಣೆ ಮಾಡಿ ಒತ್ತಾಯಪೂರ್ವಕವಾಗಿ ಆಟೋ ಚಾಲಕರ ಮೇಲೆ ಆದೇಶವನ್ನು ಹಾಕುವುದು ಸರಿಯಲ್ಲವೆಂದು ಹುಬ್ಬಳ್ಳಿ-ಧಾರವಾಡದ ಎಲ್ಲ ಆಟೋ ಸಂಘಟನೆಗಳ, ಮಾಲೀಕರ ಮತ್ತು ಚಾಲಕರು ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು. ಈ ವೇಳೆ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ದಿಕ್ಕಾರ ಗೂಗಿದರು.

ಮೊದಲೇ ಕೊರೋನಾ ಲಾಕ್ ಡೌನ್ ನಂತಹ ಪರಿಸ್ಥಿತಿಯಿಂದ ಆಟೋ ಚಾಲಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದರ ಮಧ್ಯೆ  ತೈಲ ಬೆಲೆ ಏರಿಕೆಯೂ ಕೂಡಾ ಆಟೋ ಚಾಲಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದರಿಂದ ದಿನಕ್ಕೆ ಆಟೋ ಚಾಲಕ 500-600 ರೂಪಾಯಿ ದುಡಿಮೆ ಮಾಡುವುದು ಕಷ್ಟವಾಗುತ್ತಿದೆ. ಈ ಹಣದಲ್ಲಿ ವಾಹನ ನಿರ್ವಹಣೆ, ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದೇ ದುಸ್ಥರವಾಗಿದೆ. ಈ ಎಲ್ಲ ಕಾರಣದಿಂದ ಕೂಡಲೇ ಜಿಲ್ಲಾಧಿಕಾರಿಗಳು ತಾವು ಹೊರಡಿಸಿರುವ ಆದೇಶವನ್ನು ವಾಪಾಸ್ ಪಡೆದು ಮತ್ತೊಮ್ಮೆ ಸಭೆ ನಡೆಸಿ ಪರಿಷ್ಕರಣಾ ದರವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

Leave a Reply

Your email address will not be published.