ಪ್ರಶಸ್ತಿ ಪ್ರಧಾನ ಮಾಡಲು ಹೊಸಪೇಟೆಗೆ ಆಗಮಿಸಲಿರೋ ಸನ್ನಿ ಲಿಯೋನ್

ಚಲನಚಿತ್ರ

ಬಿಟೌಟ್ ಹಾಟ್ ಬ್ಯೂಟಿ, ಪಡ್ಡೆ ಹುಡುಗರ ನಿದ್ದೆ ಕೆಡಿಸಿರೋ ಸನ್ನಿ ಲಿಯೋನ್ ಈಗಾಗ್ಲೆ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾಗಿದೆ. ಇದೀಗ ಸನ್ನಿಯನ್ನು ವಿಜಯನಗರಕ್ಕೆ ಕರೆತರೋಕೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಈ ಭಾರಿ ಸನ್ನಿ ಲಿಯೋನ್ ಬರ್ತಿರೋದು ಸಿನಿಮಾದಲ್ಲಿ ನಟಿಸೋಕಲ್ಲ, ಬದಲಾಗಿ ಪ್ರಶಸ್ತಿ ಪ್ರಧಾನ ಮಾಡಲು.          

ಸನ್ನಿ ಲಿಯೋನ್ ಜೊತೆ ಒಂದೇ ಒಂದು ಫೋಟೋ ತೆಗೆಸಿಕೊಳ್ಳಬೇಕು ಅನ್ನೋ ಆಸೆ ಸಾಕಷ್ಟು ಮಂದಿಗೆ ಇದ್ದೇ ಇರುತ್ತೆ, ಅಂಥದ್ರಲ್ಲಿ ಸನ್ನಿ ಲಿಯೋನ್ ರಿಂದ ಪ್ರಶಸ್ತಿ ಸ್ವೀಕರಿಸೋದು ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಇದೀಗ ಅಂತದೊಂದು ಆಸೆ ಈಡೇರಿಸಲು ಹೊಸಪೇಟೆಯ ಕರುನಾಡ ಕ್ರಿಯಾಶೀಲ ಸಮಿತಿ ಮುಂದಾಗಿದೆ.

ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ವಿಜಯನಗರ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ ಸಮಿತಿ ವತಿಯಿಂದ ಗುಡ್ಡು ಹತ್ತುವ ಹಾಗೂ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.

ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಲು ಸನ್ನಿ ಲಿಯೋನ್ ಗೆ ಆಹ್ವಾನ ನೀಡಲಾಗಿದೆ. ವಿಜಯನಗರದಲ್ಲಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್ ಖುದ್ದು ಸನ್ನಿ ಲಿಯೋನ್ ರನ್ನ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಆಗಸ್ಟ್ 15ರಂದು ಚಾಂಪಿಯನ್ ಸಿನಿನಾ ತಂಡ ಹೊಸಪೇಟೆಗೆ ಆಗಮಿಸುತ್ತಿದೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ಸಾಂಗ್ ಒಂದಕ್ಕೆ ಹಜ್ಜೆ ಹಾಕಿದ್ದಾರೆ. ಸನ್ನಿ ಲಿಯೋನ್ ಬರೋ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Leave a Reply

Your email address will not be published.