Home District “B.S.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಬರ್ತಿದ್ದಾರೆ” BSY ದೆಹಲಿಯಿಂದ ದಿಢೀರ್ ವಾಪಸ್ ಆಗಿದ್ದಕ್ಕೆ C.M.ಕುಮಾರಸ್ವಾಮಿ ವ್ಯಂಗ್ಯ

“B.S.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಬರ್ತಿದ್ದಾರೆ” BSY ದೆಹಲಿಯಿಂದ ದಿಢೀರ್ ವಾಪಸ್ ಆಗಿದ್ದಕ್ಕೆ C.M.ಕುಮಾರಸ್ವಾಮಿ ವ್ಯಂಗ್ಯ

413
0
SHARE

ಇನ್ನು ಬಿಎಸ್. ಯಡಿಯೂರಪ್ಪ ದಿಢೀರ್ ವಾಪಾಸ್ ಆಗಿದ್ದಕ್ಕೆ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.. ಮೈತ್ರಿ ಸರ್ಕಾರ ಕೆಡವಲು ಬಿಎಸ್ ಯಡಿಯೂರಪ್ಪ ಶತಪ್ರಯತ್ನ ಮಾಡ್ತಿದ್ದಾರೆ.. ಹಾಗಾಗಿ ದೆಹಲಿಯಿಂದ ಬೆಂಗಳೂರಿಗೆ ಓಡಾಡ್ತಿದ್ದಾರೆ.. ನೋಡೋಣ ಏನಾಗುತ್ತೆ ಅಂತಾ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ..

ರಾಜ್ಯ ರಾಜಕೀಯದ ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೆಹಲಿಯಿಂದ ಹಠಾತ್ ವಾಪಸ್ ಬರುತ್ತಿದ್ದಾರೆ. ಶುಕ್ರವಾರ ಸಂಜೆಯಷ್ಟೇ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಯಡಿಯೂರಪ್ಪ 12 ತಾಸಿನಲ್ಲೇ ಹಠಾತ್ ವಾಪಸ್ ಬರುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಯಡಿಯೂರಪ್ಪ ವಾಪಸ್ ಬರುತ್ತಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದೆ. ಕೆಲವು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೆಲವು ನಾಯಕರು ಗುಪ್ತ ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ಮೂಲಗಳ ಪ್ರಕಾರ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಕೆಲವು ಬದಲಾವಣೆಗಳು ಸಂಭವಿಸಲಿದ್ದು ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ವರಿಷ್ಠರ ನಿರ್ದೇಶನದ ಮೇರೆಗೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಕೆಲವು ರಾಜಕೀಯ ಬೆಳವಣಿಗೆಗಳು ಸಂಭವಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ..

LEAVE A REPLY

Please enter your comment!
Please enter your name here