Home Elections 2019 B.S.ಯಡಿಯೂರಪ್ಪ ಮೊದಲ ಸುದ್ದಿಗೋಷ್ಟಿಯಲ್ಲೇ ರೈತರ ಸಾಲಮನ್ನ ಬಗ್ಗೆ ಸುಳಿವು…ಅನ್ನದಾತರಿಗೆ ಸಿಹಿಸುದ್ದಿ ಕೊಡಲು ನಿರ್ಧಾರ..?!

B.S.ಯಡಿಯೂರಪ್ಪ ಮೊದಲ ಸುದ್ದಿಗೋಷ್ಟಿಯಲ್ಲೇ ರೈತರ ಸಾಲಮನ್ನ ಬಗ್ಗೆ ಸುಳಿವು…ಅನ್ನದಾತರಿಗೆ ಸಿಹಿಸುದ್ದಿ ಕೊಡಲು ನಿರ್ಧಾರ..?!

2029
0
SHARE

ನೂತನ ಸಿಎಂ ಆಗಿ ಯಡಿಯೂರಪ್ಪ ಮೊದಲ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‌ವೈ ರಾಜ್ಯದ 6 ಕೋಟಿ ಜನರಿಗೆ ಧನ್ಯವಾದ ಸಲ್ಲಿಸಿದರು. 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಿದ್ದೇನೆ ಜನರ ಬೆಂಬಲ ನನ್ನ ಪರ ಇದ್ರು ಕೂಡಾ ಕಾಂಗ್ರೆಸ್ ಚೆಲ್ಲಾಟವಾಡ್ತಿದ್ದಾರೆ…

ಅಧಿಕಾರಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಇಬ್ಬರು ಅನೈತಿಕ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ನೂರಕ್ಕೆ ನೂರು ವಿಶ್ವಾತಮತ ಗಳಿಸುತ್ತೇನೆಂದ ಬಿಎಸ್‌ವೈ ಭರವಸೆಯ ಮಾತನಾಡಿದರು…

ಆತ್ಮಸಾಕ್ಷಿ ಅನುಗುಣವಾಗಿ ಜೆಡಿಎಸ್-ಕಾಂಗ್ರೆಸ್ ಶಾಸಕರು ಬೆಂಬಲ ಕೊಡಬೇಕು ಎಂದು ಕೇಳಿಕೊಂಡರು. ಜೊತೆಗೆ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಿಎಸ್‌ವೈ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ.1ಲಕ್ಷದವರೆಗೆ ಸಾಲ ಮನ್ನಾ ಮಾಡಿದ ಸಿಎಂ ನಾಳೆ ನಾಡಿದ್ದರಲ್ಲಿ ರೈತರ 1 ಲಕ್ಷ ಸಾಲ ಮನ್ನಾ,..

ಇನ್ನರೆಡು ದಿನದಲ್ಲಿ ರೈತರ ಸಾಲ ಮನ್ನಾಗೆ ಕ್ರಮ ಕೈಗೊಳ್ಳಾದಾಗಿ ಹೇಳಿದರು. 15 ದಿನಗಳ ತನಕ ವಿಶ್ವಾಸಮತಕ್ಕೆ ಕಾಯಲ್ಲ ಇನ್ನು ಕೆಲವೇ ದಿನಗಳಲ್ಲಿ ವಿಶ್ವಾಸಮತಯಾಚನೆ ಮಾಡುತ್ತನೆ ಜೊತೆಗೆ ವಿಶ್ವಾಸಮತಯಾಚನೆಯಲ್ಲಿ ಗೆದ್ದೆ ಗೆಲ್ತೀನಿ ಎಂದ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದರು…

LEAVE A REPLY

Please enter your comment!
Please enter your name here