Home District ಕೊರೊನಾ ಮರಣ ಮೃದಂಗ ; ಜಿಲ್ಲೆಯಲ್ಲಿ ಡೆಡ್ಲಿ ವೈರಸ್ ಗೆ ಇಬ್ಬರು ಬಲಿ

ಕೊರೊನಾ ಮರಣ ಮೃದಂಗ ; ಜಿಲ್ಲೆಯಲ್ಲಿ ಡೆಡ್ಲಿ ವೈರಸ್ ಗೆ ಇಬ್ಬರು ಬಲಿ

423
0
SHARE

ಬಾಗಲಕೋಟೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವ್ರ ಸಾವಿನ ಸರಣಿ ಮುಂದುವರೆದಿದ್ದು, ಇಂದು ಕೊರೊನಾ ಸೋಂಕಿನಿಂದ ಇಬ್ಬರು ಬಲಿಯಾಗಿದ್ದಾರೆ.‌ ಬಾಗಲಕೋಟೆ ನವನಗರ ಹಾಗೂ ತಾಲೂಕಿನ ಕಲಾದಗಿ ಗ್ರಾಮದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ‌.‌

ನವನಗರದ 74 ವಯಸ್ಸಿನ ವೃದ್ದ ಸೋಂಕಿಗೆ ಬಲಿಯಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ನಸುಕಿನ ಜಾವ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಮತ್ತೋರ್ವ ಕಲಾದಗಿ ಗ್ರಾಮದ 44 ವಯಸ್ಸಿನ ವ್ಯಕ್ತಿ ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಜುಲೈ 10 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ.

ಬಳಿಕ ಕೊರೊನಾ ಸೋಂಕು ಇರುವುದು ಪತ್ತೆ ಆಗಿತ್ತು. ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗಿದ್ದು, ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆ ಆಗಬೇಕಿದೆ. ಕಲಾದಗಿ ಗ್ರಾಮದ ಮೃತ ಕಿರಾಣಿ ಅಂಗಡಿ ಮಾಲೀಕನಾಗಿದ್ದು, ಈಗ ಅಂಗಡಿಗೆ ಹೋಗಿ ಬಂದವರಲ್ಲಿ ಆತಂಕ ಶುರುವಾಗಿದೆ. ಮೃತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಮಾಹಿತಿ ಸಂಗ್ರಹ ಕಾರ್ಯ ವನ್ನ ಜಿಲ್ಲಾಡಳಿತ ನಡೆಸಿದೆ.

LEAVE A REPLY

Please enter your comment!
Please enter your name here