ಬಳ್ಳಾರಿ. ನಗರದ ಕೌಲ್ ಬಜಾರ್ ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್ ಕಳ್ಳನೋರ್ವ ಇಂದು ಅಂದರ್ ಆಗಿದ್ದಾನೆ. ಕೌಲ್ ಬಜಾರ್ ಠಾಣೆ ಪೊಲೀಸರ ಭರ್ಜರಿ ಬೇಟೆಗೆ ಸಿಕ್ಕಿಬಿದ್ದ ಖದೀಮ ಅರೆಸ್ಟ್ ಆಗಿ ಜೈಲು ಸೇರಿದ್ದಾನೆ. ಓಬಳೇಶ ಅಲಿಯಾಸ್ ಟೈಮ್ ಪಾಸ್ ಓಬಳೇಶ್ ಅನ್ನೋ ಹೆಸರಿನ ಈ ಕಳ್ಳ ಬಳ್ಳಾರಿ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಳ್ಳತನ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆನೋವಾಗಿದ್ದ.
ಯಾರೂ ಇಲ್ಲದ ವೇಳೆಯಲ್ಲಿ ನಾಜೂಕಾಗಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ದ. ಪ್ರತಿಸಲವೂ ಪೊಲೀಸರಿಗೆ ಚಳ್ಳೇ ಹಣ್ಣು ತಿನ್ನಿಸ್ತಿದ್ದ. ಹೀಗಾಗಿ ಖತರ್ನಾಕ್ ಕಳ್ಳನನ್ನ ಸೆರೆ ಹಿಡಿಯೋಕೆ ಬಳ್ಳಾರಿ ಎಸ್ ಪಿ. ಸಿ ಕೆ ಬಾಬಾರವರು ಪೊಲೀಸ್ ಇನ್ಸ್ಪೆಕ್ಟರ್ ಸುಭಾಷ್ ಚಂದ್ರಟಿ ನೇತೃತ್ವದ ತಂಡ ನೇಮಿಸಿತ್ತು. ಕಳ್ಳನ ಚಲನವಲನಗಳ ಮೇಲೆ ತೀವ್ರ ನಿಗಾ ಇಟ್ಟಿತ್ತು. ನಿನ್ನೆ ಕೌಲ್ ಬಜಾರ್ ನ ಬಾಬು ಚೌಕ್ ಹತ್ತಿರ ಕಳ್ಳನನ್ನ ವಿಚಾರಣೆಗೆ ಒಳಪಡಿಸಿಲಾಯ್ತು. ತನಿಖೆಯ ನಂತ್ರ ಕಳ್ಳ ಬಾಯ್ಬಿಟ್ಡಿದ್ದಾನೆ.
ಖದೀಮನಿಂದ ಅನಾಮತ್ತು 10 ಲಕ್ಷದ 50 ಸಾವಿರ ಮೌಲ್ಯದ ಆಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ. ಕೌಲ್ ಬಜಾರ್ ಠಾಣೆಯ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಳ್ಳನಿಗೆ ಕೋಳ ತೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.