ಬನಶಂಕರಿ ಲೇಔಟ್ ಗೆ 400 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸುತ್ತೇವೆ: ಶಾಸಕ ಎಸ್.ಆರ್. ವಿಶ್ವನಾಥ್

ಬೆಂಗಳೂರು

ಬೆಂಗಳೂರು: ಬನಶಂಕರಿ ಲೇಔಟ್ ಗೆ 400 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸುತ್ತೇವೆ ಎಂದು ಶಾಸಕ ಎಸ್.ಆರ್‌. ವಿಶ್ವನಾಥ್ ಹೇಳಿದ್ದಾರೆ. ಬನಶಂಕರಿ ಲೇಔಟ್ ಪರಿಶೀಲನೆ ಮಾಡಿ, ಬಳಿಕ ಬಿಡಿಎ ಅಧಿಕಾರಿಗಳ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಬನಶಂಕರಿ ಲೇಔಟ್​​ಗೆ ಇನ್ನೂ ಮೂಲಸೌಕರ್ಯ ಸಿಕ್ಕಿಲ್ಲ, ಹಣಕಾಸು ಕೊರತೆಯಿಂದ ಕಾಮಗಾರಿ ನಿಂತಿತ್ತು. ನಾನು ಅಧ್ಯಕ್ಷನಾದ ಮೇಲೆ ಬಾಕಿ ಹಣ ಮುಲಾಜಿಲ್ಲದೆ ವಸೂಲಿ ಮಾಡಿದ್ದೇವೆ.

ಸ್ಯಾನಿಟರಿ ಮತ್ತು ಕಾವೇರಿ ನೀರು ಕೊರತೆ ಇದೆ. ಜಲಮಂಡಳಿಗೆ ಹಣ ವರ್ಗಾವಣೆ ಮಾಡಿ ಕೆಲಸ ಆರಂಭಿಸಲು ಹೇಳಿದ್ದೇವೆ ಎಂದು ಬಿಜೆಪಿ ಯಲಹಂಕ ಶಾಸಕ ಎಸ್.ಆರ್‌. ವಿಶ್ವನಾಥ್ ತಿಳಿಸಿದರು. ಹಳೇ ಬಡಾವಣೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚಿಸಿದ್ದಾರೆ. ಎರಡು ಬಡಾವಣೆಗಳನ್ನು ಬಿಬಿಎಂಪಿಗೆ ವರ್ಗಾವಣೆ ಮಾಡುತ್ತೇವೆ. ಬಿಡಿಎ ಮಾಡಿರುವ ಬಡಾವಣೆಗಳಲ್ಲಿ ಎಲ್ಲಾ ಮೂಲಸೌಕರ್ಯ ಕಲ್ಪಿಸುತ್ತೇವೆ. ಅಭಿವೃದ್ಧಿ ಮಾಡಿದ ಬಳಿಕ ಬಿಬಿಎಂಪಿ ಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published.