Bangalore Crime.. ಬೈಕ್ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯನ್ನೇ ಕೊಲೆ ಮಾಲೀಕ..!

ಅಪರಾಧ ಬೆಂಗಳೂರು

ಬೆಂಗಳೂರು: ಕಳ್ಳತನ ಮಾಡಲು ಬಂದ ವ್ಯಕ್ತಿಯ ಕೊಲೆ ನಡೆದಿರುವ ಘಟನೆ ಬಾಗಲೂರು ಬಳಿಯ ದ್ವಾರಕ ನಗರದಲ್ಲಿ ನಡೆದಿದೆ. ಅಮರನಾಥ್ ಮಹಾತೋ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಈ ಹಿಂದೆ ಸಹ ಮಂಜುನಾಥ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಹಲವಾರು ಬಾರಿ ಕಳ್ಳತನ ನಡೆದಿತ್ತು.  ಈ ಹಿನ್ನೆಲೆ ಇಂದು ಯಾರು ಬರ್ತಾರೆ ನೋಡುವ ಎಂದು ಮಾಲಿಕ ಕರುಣಾಕರನ್ ಅಂಡ್ ಟೀಮ್ ಕಾದು ಕುಳಿತಿದೆ. ಈ ವೇಳೆ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಮೃತ ಅಮರನಾಥ್ ಕಳ್ಳತನಕ್ಕೆ ಬಂದಿದ್ದ.

ಇದೇ ವೇಳೆ ಕಬ್ಬಿಣ ಕದಿಯುವಾಗ ಮಾಲೀಕ ಕುರುಣಾಕರನ್ ಅಂಡ್ ಟೀಮ್ ಮೃತ ವ್ಯಕ್ತಿ ಅಮರನಾಥ ನನ್ನು ಹಿಡಿದು, ಹಿಗ್ಗಾ ಮುಗ್ಗಾ ಥಳಿಸಿ ಹಲ್ಲೆ ಮಾಡಿದ್ದಾರೆ. ನಂತರ ತಮಗೆ ಗೊತ್ತಿಲ್ಲದಂತೆ ರಸ್ತೆ ಬದಿಯಲ್ಲಿ ಹಾಕಿ ಸೀನ್ ಕ್ರಿಯೇಟ್ ಮಾಡಿದ್ದಾರೆ. ಬಳಿಕ ತಾವೇ ಅದನ್ನು ನೋಡಿದಂತೆ ಬಿಂಬಿಸಿ ಯಲಹಂಕ ಸರ್ಕಾರಿ ಅಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು, ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ. ಇನ್ನೂ ಆರೋಪಿಗಳ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.