Bangalore crime.. ಕಿಟಕಿ ಬಳಿಯಿದ್ದ ವರಮಹಾಲಕ್ಷ್ಮಿಯನ್ನೇ ಬಿಡಲಿಲ್ಲ ಕಳ್ಳರು

ಅಪರಾಧ ಬೆಂಗಳೂರು

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಲಕ್ಷ್ಮಿಗೆ ಹಾಕಿದ್ದ ಬಂಗಾರವನ್ನೇ ಖದೀಮರು ಕದ್ದು ಹೊತ್ತೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮಿಲೇಔಟ್ ಠಾಣಾ ವ್ಯಾಪ್ತಿಯ ಸತ್ಯನಾರಾಯಣ ಲೇ ಔಟ್ ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮೋಹನ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮೋಹನ್ ಅವರ ಮನೆಯ ಕಿಟಕಿ ಬಳಿ ವರಮಹಾಲಕ್ಷ್ಮಿ ಯನ್ನು ಕೂರಿಸಲಾಗಿತ್ತು.

ಇದನ್ನು ಗಮನಿಸಿದ ಖದೀಮರು ರಾತ್ರಿ ವೇಳೆ ಮನೆಯವರು ಎಲ್ಲರೂ ಮಲಗಿರುವ ಸಮಯದಲ್ಲಿ ಬಂದು ಕೊಲನ್ನು ಬಳಿಸಿ ದೇವರಿಗೆ ಹಾಕಿದ ಬಂಗಾರವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಸುಮಾರು 200 ಗ್ರಾಂ ಬಂಗಾರವನ್ನು ಖದೀಮರು ಕಳ್ಳತನ ಮಾಡಿದ್ದು, ಈ ಸಂಬಂಧ ಮನೆಯ ಮಾಲೀಕರು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಸತ್ಯನಾರಾ ಯಣ ಲೇ ಔಟ್ ನ ಸಿಸಿಟಿವಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published.