ಎಚ್ಚೆತ್ತುಕೊಂಡ ಬೆಂಗಳೂರು ಸೈಬರ್ ಪೊಲೀಸರು: 35 ಅನಧಿಕೃತ ಲೋನ್ ಆ್ಯಪ್ ಗಳ ವಿರುದ್ಧ FIR

ಅಪರಾಧ

ಬೆಂಗಳೂರು: ಅನಧಿಕೃತವಾಗಿರುವ ಲೋನ್ ಆಯಪ್​ಗಳ ವಿರುದ್ಧ ಬೆಂಗಳೂರಿನ ಸೈಬರ್​ ಕ್ರೈಂ ಪೊಲೀಸರು ಕ್ರಮಕ್ಕೆ ಮುಂದಾ ಗಿದ್ದಾರೆ. ಆನ್​ಲೈನ್​ ಲೋನ್​ಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದ 35 ಆಯಪ್​ಗಳ ವಿರುದ್ಧ ಪೊಲೀಸರು ಒಂದೇ ಬಾರಿ 9 ಎಫ್.ಐ ಆರ್​ಗಳನ್ನು ದಾಖಲಿಸಿರುವುದು ಬೆಳಕಿಗೆ ಬಂದಿದೆ. ಲೋನ್​ ಆಯಪ್​ಗಳು ಅಲ್ಪಾವಧಿಗೆ ಹೆಚ್ಚಿನ ಬಡ್ಡಿಗೆ ಸಾಲದ ಆಮಿಷ ವೊಡ್ಡುತ್ತವೆ. ಪ್ರೊಸೆಸಿಂಗ್​ ಚಾರ್ಜ್​ ಹೆಸರಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಬೆಂಗಳೂರು ಸೇರಿ ದೇಶಾದ್ಯಂತ ಇನ್​​ಸ್ಟಂಟ್​ ಲೋನ್ ಹೆಸರಿನಲ್ಲಿ ಕಿರುಕುಳ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೀನಾ ಲೋನ್​ ಆಯಪ್​ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಪೊರೇಟ್​ ವ್ಯವಹಾರಗಳ ಸಚಿವಾಲಯ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಆಯಪ್​ಗಳ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.