ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆಯಿಂದ ಮೂರು ದಿನ ಪವರ್ ಕಟ್: ಬೆಸ್ಕಾಂ

ಬೆಂಗಳೂರು

ಬೆಂಗಳೂರು: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆಯಿಂದ ಮೂರು ದಿನಗಳು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ನಗರದ ಹಲವೆಡೆ ವಿದ್ಯುತ್ ತಂತಿಗಳ ಬದಲಾವಣೆ ಹಾಗೂ ನೆಲ ಮಾರ್ಗದ ಮೂಲಕ ವಿದ್ಯುತ್ ಕೇಬಲ್​ಗಳನ್ನು ಹಾಕುವ ಕೆಲಸ ಕಾರ್ಯಗಳನ್ನು ಬೆಸ್ಕಾಂ ಕೈಗೆತ್ತಿಕೊಂಡಿದ್ದು, ಇದರಿಂದಾಗಿ ನಿತ್ಯವೂ ಒಂದಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಕೆಲವು ದಿನಗಳಿಂದ ನಗರವಾಸಿಗಳು ಪವರ್ ಕಟ್ ಸಮಸ್ಯೆ ಎದುರಿಸುತ್ತಿದ್ದು,

ಇದೀಗ ಆಗಸ್ಟ್ 10ರಿಂದ 13ರ ವರೆಗೆ ಕೆಲವು ಕಡೆಗಳಲ್ಲಿ ಪವರ್ ಕಟ್ ಆಗಿದೆ.  ಅದರಂತೆ ಜಕ್ಕಸಂದ್ರ, ಎಚ್‌ಎಸ್‌ಆರ್ 5 ನೇ ಸೆಕ್ಟರ್, ಟೀಚರ್ಸ್ ಕಾಲೋನಿ, ವೆಂಕಟಾಪುರದ ಕೆಲವು ಭಾಗಗಳು, ಸಾಲರ್‌ಪುರಿಯ ಗ್ರೀನೇಜ್ ಅಪಾರ್ಟ್‌ಮೆಂಟ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತಂತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Leave a Reply

Your email address will not be published.